ಒಡಿಶಾ: ಇಲ್ಲಿನ ಬಾಲಸೂರ್ ಜಿಲ್ಲೆಯ ಬಹನಾಗ ರೈಲು ನಿಲ್ದಾಣದಲ್ಲಿ ನಿನ್ನೆ ರಾತ್ರಿ ಮೂರು ರೈಲುಗಳ ನಡುವೆ ಸಂಭವಿಸಿದಂತ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 238ಕ್ಕೆ ಏರಿಕೆಯಾಗಿದೆ. ಅಲ್ಲದೇ 600 ಮಂದಿ ಗಾಯಗೊಂಡಿರುವುದಾಗಿ ರೈಲ್ವೆ ಇಲಾಖೆಯು ಅಧಿಕೃತವಾಗಿ ಮಾಹಿತಿ ನೀಡಿದೆ.
ಈ ಕುರಿತಂತೆ ರೈಲ್ವೆ ವಕ್ತಾರ ಅಮಿತಾಬ್ ಶರ್ಮಾ ಎಂಬುವರು, ಒಡಿಶಾ ಮೂರು ರೈಲುಗಳ ಡಿಕ್ಕಿಯಾಗಿ ಉಂಟಾದಂತ ಅಪಘಾತದಲ್ಲಿ ಈವರೆಗೆ 238 ಜನರು ಸಾವನ್ನಪ್ಪಿದ್ದಾರೆ. 600 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ.