ಬೆಂಗಳೂರು:ಒಡಿಶಾದಲ್ಲಿ ಭೀಕರ ರೈಲು ಅಪಘಾತ ಹಿನ್ನೆಲೆಯಲ್ಲಿ ಹಲವು ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದ್ದು, ಕೆಲ ಮಾರ್ಗಗಳನ್ನು ಬದಲಿಸಲಾಗಿದೆ. ರೈಲು ದುರಂತದಲ್ಲಿ ಸಾವಿನ ಸಂಖ್ಯೆ 233ಕ್ಕೆ ಏರಿಕೆಯಾಗಿದ್ದು, ಸುಮಾರು 900ಕ್ಕೂ ಅಧಿಕ ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
18 ರೈಲುಗಳ ಸಂಚಾರವನ್ನು ರದ್ದು ಮಾಡಿ, 7 ರೈಲು ಮಾರ್ಗವನ್ನು ಬದಲಿಸಲಾಗಿದೆ ಎಂಬ ಮಾಹಿತಿ ತಿಳಿಬಂದಿದೆ. ಹೌರಾ-ಪುರಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು, ಹೌರಾ-ಬೆಂಗಳೂರು ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಮತ್ತು ಹೌರಾ-ಚೆನ್ನೈ ರೈಲುಗಳು ರದ್ದಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೌರಾ ಎಕ್ಸ್ಪ್ರೆಸ್ ರೈಲು ಹೌರಾ ಜಂಕ್ಷನ್ಗೆ ತೆರಳಲು ಎರಡು ದಿನಗಳ ಕಾಲ ಹಿಡಿಯುತ್ತದೆ. ತನ್ನ ಪ್ರಯಾಣದಲ್ಲಿ ಹೌರಾ ಎಕ್ಸ್ಪ್ರೆಸ್ ರೈಲು ಮೂರು ರಾಜ್ಯಗಳನ್ನು ದಾಟಲಿದೆ. ಬೆಂಗಳೂರಿನಿಂದ ಹೊರಟು -ಆಂಧ್ರ – ಒಡಿಶಾ – ಕೊಲ್ಕತ್ತಾವನ್ನು ಸೇರಲಿದೆ. ನಿನ್ನೆಯು ಸಹ ಬೆಂಗಳೂರಿನಿಂದ ಹೌರಾ ರೈಲು ಹೊರಟಿತ್ತು. ಬೆಂಗಳೂರಿನಿಂದ-ಹೌರಾ ಜಂಕ್ಷನ್ಗೆ ಬರೋಬ್ಬರಿ 1937 ಕಿ.ಮೀ ಪ್ರಯಾಣಯಾಣಿಸಬೇಕಿತ್ತು. ಬೆಂಗಳೂರಿನಿಂದ ಬಾಲಸೋರ್ ಜಿಲ್ಲೆಗೆ 1706 ಕಿ.ಮೀ ಪ್ರಯಾಣ ಮಾಡಿತ್ತು. ಇನ್ನು ಕೇವಲ 230 ಕಿ.ಲೋ ಪ್ರಯಾಣ ಬಾಕಿ ಇತ್ತು. ಆ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ.
ಇಂದು ಸಹ ಕೆ.ಆರ್ ಪುರಂನಿಂದ ಹೌರಾ ಎಕ್ಸ್ಪ್ರೆಸ್ ರೈಲು ಹೊರಡಬೇಕಿತ್ತು. ಆದರೆ, ದುರಂತ ಹಿನ್ನೆಲೆ ರದ್ದಾಗಿದೆ. ಇಂದು ಬೆಳಗ್ಗೆ 10.50ಕ್ಕೆ ರೈಲು ಹೊರಡಬೇಕಿತ್ತು. ಘಟನೆಯಲ್ಲಿ ಸಾಕಷ್ಟು ಸಾವು-ನೋವುಗಳು ಉಂಟಾಗಿದ್ದು ಮತ್ತು ಹಳಿಗಳು ಹಾಳಾಗಿರುವ ಕಾರಣ ರೈಲು ಪ್ರಯಾಣ ರದ್ದಾಗಿದೆ