ಕಾಂಗ್ರೆಸ್‌ನ 4ನೇ ಗ್ಯಾರಂಟಿಯಾದ ಶಕ್ತಿ ಯೋಜನೆಯನ್ನ ಈ ತಿಂಗಳ 11ರಿಂದ ಜಾರಿ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಎಲ್ಲಾ ಹೆಣ್ಣುಮಕ್ಕಳಿಗೆ ಬಸ್ ಪ್ರಯಾಣ ಉಚಿತ ಎಂದು ಘೋಷಿಸಲಾಗಿದೆ. ರಾಜ್ಯದ ಒಳಗಡೆ ಎಸಿ ಬಸ್ ಹೊರತುಪಡಿಸಿ ಉಳಿದೆಲ್ಲಾ ಬಸ್‌ನಲ್ಲಿ ಪ್ರಯಾಣ ಉಚಿತವಾಗಿರಲಿದೆ. ಆದರೆ ರಾಜ್ಯದಿಂದ ಹೊರಹೋಗುವ ಸರ್ಕಾರಿ ಬಸ್‌ನಲ್ಲಿ ಈ ಯೋಜನೆ ಅನ್ವಯವಿಲ್ಲ. ನಾನ್ ಎಸಿ ಸ್ಲಿಪರ್, ರಾಜಹಂಸ ಬಸ್‌ಗಳಲ್ಲೂ ಈ ಯೋಜನೆ ಅನ್ವಯವಾಗುವುದಿಲ್ಲ ಎಂದಿದ್ದಾರೆ.ಉಳಿದಂತೆ ಸರ್ಕಾರಿ ಬಸ್‌ನಲ್ಲಿ 11ರಿಂದ ಉಚಿತ ಪ್ರಯಾಣ ಜಾರಿಮಾಡಲಾಗಿದೆ.