ಮೊದಲಿಗೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ನಮ್ಮ ಮಾತಿಗೆ ನಾವು ಬದ್ಧ ಎಂದರು.ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ನೀಡಿದ್ದ 5 ಗ್ಯಾರಂಟಿ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ಯಾಬಿನೆಟ್ ಸಚಿವರೊಂದಿಗೆ ಸಭೆ ನಡೆಸಿದರು.
ಇದನ್ನು ಎಲ್ಲ ಮನೆಗಳಿಗೂ ಹಂಚಲಾಗಿತ್ತು. ಈ ಮಧ್ಯೆ ವಿರೋಧ ಪಕ್ಷದವರು ಅಪಪ್ರಚಾರ ಮಾಡಿದ್ದರು. ಮಾಧ್ಯಮಗಳಲ್ಲೂ ಚರ್ಚೆ ನಡೆದಿತ್ತು. ನಾವು 5 ಗ್ಯಾರಂಟಿಗಳಿಗೆ ನಾವು ಆಗಲೇ ಜಾರಿ ಆದೇಶ ಹೊರಡಿಸಿದ್ದೆವು. ಈಗಲೂ ಕ್ಯಾಬಿನೆಟ್ ಸಭೆಯಲ್ಲೂ ಚರ್ಚೆ ಮಾಡಿ ನಿರ್ಧಾರ ಮಾಡಿದ್ದೇವೆ. 5 ಗ್ಯಾರಂಟಿಗಳನ್ನು ಈ ಆರ್ಥಿಕ ವರ್ಷದಲ್ಲಿ ಜಾರಿ ಮಾಡಲು ತೀರ್ಮಾನ ಮಾಡಿದ್ದೇವೆ.
ಇದು ಯಾವುದೇ ಜಾತಿ, ಧರ್ಮ, ಭಾಷೆಗಳ ತಾರತಮ್ಯವಿಲ್ಲದೆ ಜಾರಿ ಮಾಡುತ್ತೇವೆ. ಕರ್ನಾಟಕದ ಜನತೆಗೆ ಈ ಗ್ಯಾರಂಟಿ ಜಾರಿ ಮಾಡುತ್ತೇವೆ. 1. ಗೃಹಜ್ಯೋತಿ, 200 ಯುನಿಟ್ ಉಚಿತ ವಿದ್ಯುತ್ ಇದು ಮೊದಲ ಗ್ಯಾರಂಟಿಯಾಗಿದೆ. ಇದು ಜಾರಿಗೂ ತೀರ್ಮಾನ ಮಾಡಿದ್ದೇವೆ. ಇದಕ್ಕೆ 12 ತಿಂಗಳ ಅವಧಿ ಲೆಕ್ಕ ತೆಗೆದುಕೊಳ್ಳಲಾಗುತ್ತದೆ. ಇದಕ್ಕೆ ಶೇಕಡ 10 ಹೆಚ್ಚು ಮಾಡುತ್ತೇವೆ. 200 ಯುನಿಟ್‌ವರೆಗಿನ ವಿದ್ಯುತ್ ಬಳಸಿದರೆ ಶುಲ್ಕ ವಿಧಿಸಲ್ಲ.
ಶೇಕಡ 70 ರಷ್ಟು ವಿದ್ಯುತ್ ಬಳಸಿದರೆ ಶೇಕಡ 10ರಷ್ಟು ಹೆಚ್ಚಿಸಿ ನೋಡುತ್ತೆವೆ. ಆಗಲು 200 ಯುನಿಟ್ ಬರಲಿಲ್ಲ ಎಂದರೆ ಶುಲ್ಕ ಇರಲ್ಲ. ಈ ತಿಂಗಳು ಬಿಲ್ ತಯಾರು ಆಗಿರುವುದರಿಂದ ಮುಂದಿನ ತಿಂಗಳು ಜುಲೈ 1ರಿಂದ ಇದು ಜಾರಿ ಬರಲಿದೆ. ಇಲ್ಲಿವರೆಗೂ (ಜುಲೈ) ಉಳಿಸಿರುವ ಬಾಕಿಯನ್ನು ಅವರೇ ಕಟ್ಟಬೇಕು ಎಂದರು.