ನವದೆಹಲಿ:ತಿಂಗಳ ಮೊದಲ ದಿನವೇ ಗ್ರಾಹಕರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. 19 ಕೆಜಿ ಎಲ್ಪಿಜಿ ಸಿಲಿಂಡರ್ನ ಬೆಲೆ 83.50 ರೂ.ಗೆ ಇಳಿಕೆಯಾಗಿದೆ.
ಸರ್ಕಾರಿ ತೈಲ ಕಂಪನಿಗಳು (ಒಎಂಸಿ) ಬಿಡುಗಡೆ ಮಾಡಿದ ಬೆಲೆಯ ಪ್ರಕಾರ, ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 83 ರೂ.ನಷ್ಟು ಇಳಿಕೆಯಾಗಿದೆ.
ಈ ಹೊಸ ದರ ಇಂದಿನಿಂದಲೇ ಜಾರಿಗೆ ಬರಲಿದೆ. 19 ಕೆಜಿ ವಾಣಿಜ್ಯ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಗೆ ಈಗ 1773 ರೂ. ಈ ಮೊದಲು ಸಿಲಿಂಡರ್ ರೂ.1856.50 ಇತ್ತು. ಆದರೆ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಮೊದಲಿನ ದರದಲ್ಲೇ ಸಿಗಲಿದೆ.
ದೆಹಲಿಯಲ್ಲಿ ಗ್ಯಾಸ್ ಸಿಲಿಂಡರ್ 1856.50 ರೂ.ನಿಂದ 1773 ರೂ.ಗೆ ಇಳಿದಿದೆ. ಕೋಲ್ಕತ್ತಾದಲ್ಲಿ ಹಿಂದಿನ 1960.50 ರೂ.ಗೆ ಹೋಲಿಸಿದರೆ ಈಗ 1875.50 ರೂ. ಇದೆ. ಅದೇ ರೀತಿ ಈ ಹಿಂದೆ ಮುಂಬೈನಲ್ಲಿ 1808.50 ರೂ.ಗೆ ಲಭ್ಯವಿದ್ದು, ಈಗ 1725 ರೂ.ಗೆ ಲಭ್ಯವಾಗಲಿದೆ. ಚೆನ್ನೈನಲ್ಲಿ 2021.50 ರೂ.ನಿಂದ 1937 ರೂ.ಗೆ ಇಳಿದಿದೆ.