ಮಣಿಪಾಲ: ಶಿಕ್ಷಣ, ಹಣಕಾಸು ಮತ್ತು ಆರೋಗ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಹಾಗೂ ಶಿಕ್ಷಣದ ಮೂಲಕ ಹಲವಾರು ಜನರ ಜೀವನದಲ್ಲಿ ಬದಲಾವಣೆಗಳನ್ನು ತಂದ ಡಾ| ಟಿ.ಎಂ.ಎ. ಪೈ ಮತ್ತು ಟಿ.ಎ. ಪೈ ಅವರನ್ನು ಸ್ಮರಿಸುವ ಸ್ಮತಿ ದಿನವನ್ನು ಮಾಹೆ ವತಿಯಿಂದ ಸೋಮವಾರ ಆಯೋಜಿಸಲಾಯಿತು.
ವಿಶ್ವವಿದ್ಯಾನಿಲಯದ ಕಟ್ಟಡದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಹೆ ವಿ.ವಿ. ಟ್ರಸ್ಟಿ ವಸಂತಿ ಆರ್. ಪೈ ಮಣಿಪಾಲ, ಮಾಹೆ ವಿ.ವಿ. ಸಹಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್, ಕುಲಪತಿ ಲೆ|ಜ| ಡಾ| ಎಂ.ಡಿ. ವೆಂಕಟೇಶ್ ಸೇರಿದಂತೆ ಮಾಹೆಯ ಇತರ ಸಂಸ್ಥೆಗಳ ಮುಖ್ಯಸ್ಥರು ಡಾ| ಟಿ.ಎಂ.ಎ ಪೈ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ವಿ| ಮಧೂರು ಪಿ. ಬಾಲಸುಬ್ರಹ್ಮಣ್ಯನ್ ಮತ್ತು ಅವರ ತಂಡದಿಂದ ಸ್ಮತಿ ಭವನದಲ್ಲಿ ಸಂಗೀತ ಕಾರ್ಯಕ್ರಮ ನಡೆಯಿತು.
ವಸಂತಿ ಆರ್. ಪೈ ಅವರು ಮಣಿಪಾಲದ ಮಾಧವ ವಿಹಾರ್ ಗಾರ್ಡನ್‌ನಲ್ಲಿ ಡಾ| ಟಿ.ಎಂ.ಎ. ಪೈ ಅವರಿಗೆ ಪುಷ್ಪ ನಮನ ಸಲ್ಲಿಸಿದರು. ಮಾಹೆ ವಿ.ವಿ. ಸಹಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್ ಪುಷ್ಪ ನಮನ ಸಲ್ಲಿಸಿದರು.