ಉಡುಪಿ:ಇಂದು ಮುಂಜಾನೆ ಉಡುಪಿ ನಗರದ ಸುತ್ತಮುತ್ತ ಗುಡುಗು ಮಿಂಚು ಸಹಿತ ಧಾರಾಕಾರ ಮಳೆಯಾಗಿದ್ದು ಮೋಡ ಕವಿದ ವಾತಾವರಣ ಮುಂದುವರಿದಿದೆ.ಬಿಸಿಲಿನ ಅಬ್ಬರಕ್ಕೆ ಕಾವೇರಿದ್ದ ಉಡುಪಿ ವರುಣನ ಆಗಮನದಿಂದ ವಾತಾವರಣವನ್ನು ತಂಪಾಗಿಸಿದೆ.
ಬಿಸಿಲಿನ ದಗೆಯಿಂದ ಬೇಸತ್ತಿದ್ದ ಹಾಗೂ ಕುಡಿಯುವ ನೀರಿನ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿರುವ ಜನತೆಗೆ ಒಂದೆಡೆ ಖುಷಿಯಾದ್ರೆ ಇನ್ನೊಂದೆಡೆ ಬೆಳಗಿನ ಜಾವ ಏಕಾಏಕಿ ಬಂದ ಮಳೆಯಿಂದಾಗಿ ವಾಹನ ಸವಾರರು ಪರದಾಡುವಂತಾಗಿತ್ತು.
ಹವಾಮಾನ ಇಲಾಖೆಯ ವರದಿಯಂತೆ ಕರಾವಳಿ ಜಿಲ್ಲೆಗಳಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಭಾರಿ ಮಳೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ