ಮರ್ಣೆ : ಜೀವನದಲ್ಲಿ ಮನನೊಂದ ಯುವಕನೋರ್ವ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಅಲೆವೂರಿನ ಮರ್ಣೆ ಎಂಬಲ್ಲಿ ನಡೆದಿದೆ. ಮರ್ಣೆ ನಿವಾಸಿ 47ವರ್ಷದ ಸಂತೋಷ್ ಆಚಾರ್ಯ ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಮರದ ಕೆಲಸ ಮಾಡುತ್ತಿದ್ದು, ಕೆಲಸದ ಮೂಲಕ ಹೆಚ್ಚು ಜನಮನ್ನಣೆ ಗಳಿಸಿದ್ದರು. ಮನೆಯವರೆಲ್ಲರು ಆರತಕ್ಷತೆ ಕಾರ್ಯಕ್ರಮ ಹೋಗಿದ್ದರು. ಈ ವೇಳೆ ಸಂತೋಷ್ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ. ಮಣಿಪಾಲ ಪೊಲೀಸರು ಸ್ಥಳಕ್ಕೆ ಆಗಮಿಸಿ ಕಾನೂನು ಪ್ರಕ್ರಿಯೆ ನಡೆಸಿದರು. ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರು ಮರಣೋತ್ತರ ಪರೀಕ್ಷೆಗಾಗಿ ಮೃತದೇಹ ಸಾಗಿಸಲು ನೆರವಾದರು.