ಉಡುಪಿ: ಉಡುಪಿಯ ಅಷ್ಟಮಠಗಳಲ್ಲೊಂದಾದ ಪುತ್ತಿಗೆ ಮಠದ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ತಮ್ಮ ಶಿಷ್ಯರಾದ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರೊಡಗೂಡಿ ನಡೆಸಲಿರುವ ಚತುರ್ಥ ಶ್ರೀಕೃಷ್ಣ ಪೂಜಾ ಪರ್ಯಾಯದ ಪೂರ್ವಭಾವಿ “ಅಕ್ಕಿ ಮುಹೂರ್ತ’ವು ಇಂದು ಬೆಳಗ್ಗೆ ಶ್ರೀ ಪುತ್ತಿಗೆ ಮಠದಲ್ಲಿ ನೆರವೇರಿತು
ಪೂರ್ವಾಹ್ನ 7.30ಕ್ಕೆ ದೇವತಾ ಪ್ರಾರ್ಥನೆ-ಚಂದ್ರೇಶ್ವರ, ಅನಂತೇಶ್ವರ, ಶ್ರೀಕೃಷ್ಣ ದರ್ಶನ, 8ಕ್ಕೆ ಚಿನ್ನದ ಪಾಲಕಿಯಲ್ಲಿ ಶ್ರೀಮುಡಿ ಮೆರವಣಿಗೆ, 8.45ಕ್ಕೆ ತಂಡುಲ ಸಂಗ್ರಹ, 9ಕ್ಕೆ ವಿವಿಧ ಸಂಘ-ಸಂಸ್ಥೆಗಳಿಂದ ಅಕ್ಕಿ ಸಂಗ್ರಹ ಸಂಕಲ್ಪ,ನೆರವೇರಿತು
9.30ಕ್ಕೆ ಪುತ್ತಿಗೆ ಶ್ರೀಗಳು ಭಕ್ತರಿಗೆ ಆಶೀರ್ವಚನ ನೀಡಿ, ನಂತರ ಫಲ-ಮಂತ್ರಾಕ್ಷತೆ ವಿತರಿಸಿದರು. ಭಕ್ಯರಿಂದ, ವಿವಿಧ ಸಂಘಟನೆಗಳಿಂದ 108ಕ್ಕೂಅಧಿಕ ಸಾಲಂಕೃತ ಅಕ್ಕಿ ಮುಡಿಗಳನ್ನು ಬುಧವಾರ ರಾತ್ರಿ ಸಿದ್ದಪಡಿಸಲಾಗಿತ್ತು.
ಸಮಾರಂಭದಲ್ಲಿ ಕ್ಷೇತ್ರದ ನಿಕಟಪೂರ್ವ ಶಾಸಕರಾದ ಶ್ರೀ ಕೆ ರಘುಪತಿ ಭಟ್,ಉಡುಪಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಯಶ್ ಪಾಲ್ ಸುವರ್ಣ ಕಾಪು ಕ್ಷೇತ್ರದ ಶಾಸಕರಾದ ಶ್ರೀ ಸುರೇಶ್ ಶೆಟ್ಟಿ ಗುರ್ಮೆ ಮೊದಲಾದ ಗಣ್ಯರು ಉಪಸ್ಥಿತರಿದ್ದರು.