ನವದೆಹಲಿ : ವಿಶ್ವದ ಟಾಪ್ 10 ಶತಕೋಟ್ಯಾಧಿಪತಿಗಳ ಸಂಪತ್ತು ಮತ್ತೊಮ್ಮೆ ದೊಡ್ಡ ಬದಲಾವಣೆಯನ್ನ ಕಂಡಿದೆ. ಅನೇಕ ಶ್ರೀಮಂತರ ನಿವ್ವಳ ಮೌಲ್ಯವು ಕುಸಿದಿದ್ದರೂ, ಭಾರತದ ದೊಡ್ಡ ಉದ್ಯಮಿಗಳ ಸಂಪತ್ತು ಹೆಚ್ಚಾಗಿದೆ. ಹಾಗಿದ್ರೆ, ವಿಶ್ವದ ಶತಕೋಟ್ಯಾಧಿಪತಿಗಳ ಹೊಸ ಪಟ್ಟಿಯಲ್ಲಿ ಯಾರು ಮೊದಲ ಸ್ಥಾನದಲ್ಲಿದ್ದಾರೆ.?
ಬ್ಲೂಮ್ಬರ್ಗ್ ಬಿಲಿಯನೇರ್ ಸೂಚ್ಯಂಕದ ಪ್ರಕಾರ, ಕಳೆದ 24 ಗಂಟೆಗಳಲ್ಲಿ, ಟಾಪ್ -20 ರಲ್ಲಿ 18 ಶತಕೋಟ್ಯಾಧಿಪತಿಗಳ ಸಂಪತ್ತು ಕುಸಿದಿದೆ. ಈ ಪೈಕಿ ಅಮೆಜಾನ್ ಸಿಇಒ ಜೆಫ್ ಬೆಜೋಸ್ ಹೆಚ್ಚು ನಷ್ಟ ಅನುಭವಿಸಿದ್ದು, ಅವರ ನಿವ್ವಳ ಮೌಲ್ಯವು 19.8 ಬಿಲಿಯನ್ ಡಾಲರ್ ಅಂದರೆ ಸುಮಾರು 1,63,909 ಕೋಟಿ ರೂ.ಗಳಷ್ಟು ಕಡಿಮೆಯಾಗಿದೆ. ಈಗ ಅವರ ನಿವ್ವಳ ಮೌಲ್ಯ $139 ಬಿಲಿಯನ್ ಆಗಿದ್ರೂ, ಬೆಜೋಸ್ ವಿಶ್ವದ ಮೂರನೇ ಶ್ರೀಮಂತ ವ್ಯಕ್ತಿಯಾಗಿ ಉಳಿದಿದ್ದಾರೆ.
ಬರ್ನಾರ್ಡ್ ಅರ್ನಾಲ್ಟ್ ಅವರ ನಿವ್ವಳ ಮೌಲ್ಯದಲ್ಲಿ ಮತ್ತೊಂದು ಪ್ರಮುಖ ಕುಸಿತ ಕಂಡು ಬಂದಿದೆ. ಕಳೆದ 24 ಗಂಟೆಗಳಲ್ಲಿ, ಅವರ ನಿವ್ವಳ ಮೌಲ್ಯವು 11.2 ಡಾಲರ್ ಅಥವಾ ಸುಮಾರು 92,000 ಕೋಟಿ ರೂ.ಗಳ ಕುಸಿತ ಕಂಡಿದೆ. ಇದರೊಂದಿಗೆ, ಅವರ ಆಸ್ತಿ $200 ಬಿಲಿಯನ್’ಗಿಂತ ಕಡಿಮೆಯಾಗಿದೆ.
ಗೌತಮ್ ಅದಾನಿ ಗಳಿಸಿದ ಆದಾಯ ಎಷ್ಟು?
ವಿಶ್ವದ ಶ್ರೀಮಂತರ ಸಂಪತ್ತಿನಲ್ಲಿ ಕುಸಿತವಾಗಿದ್ರೆ, ಭಾರತೀಯ ಕೈಗಾರಿಕೋದ್ಯಮಿಗಳ ನಿವ್ವಳ ಮೌಲ್ಯ ಹೆಚ್ಚಾಗಿದೆ. ಗೌತಮ್ ಅದಾನಿ ಅವರ ನಿವ್ವಳ ಮೌಲ್ಯವು ಕಳೆದ 24 ಗಂಟೆಗಳಲ್ಲಿ 4.38 ಬಿಲಿಯನ್ ಡಾಲರ್ ಏರಿಕೆಯಾಗಿ 64.2 ಬಿಲಿಯನ್ ಡಾಲರ್’ಗೆ ತಲುಪಿದೆ. ಅವರು ಶ್ರೀಮಂತರ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರ ನಿವ್ವಳ ಮೌಲ್ಯವು 5.49 ಮಿಲಿಯನ್ ಡಾಲರ್ ಹೆಚ್ಚಾಗಿದ್ದು, ಅವರ ನಿವ್ವಳ ಮೌಲ್ಯವು ಈಗ 84.1 ಬಿಲಿಯನ್ ಡಾಲರ್ ಆಗಿದೆ. ಅವರು ಈಗ ವಿಶ್ವದ 13ನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ.