ಬೆಂಗಳೂರು: ಇಂದು ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾಗಿ ಶಾಸಕ ಯು.ಟಿ ಖಾದರ್ ಅವಿರೋಧವಾಗಿ ಆಯ್ಕೆಯಾಗಿದ್ದರು. ಈ ಬಳಿಕ ಹಂಗಾಮಿ ಸ್ಪೀಕರ್ ಆರ್ ವಿ ದೇಶಪಾಂಡೆ ಅವರಿಂದ ಅಧಿಕಾರ ಕೂಡ ವಹಿಸಿಕೊಂಡರು.
ಸ್ಪೀಕರ್ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಮಾತನಾಡಿದಂತ ಅವರು, ಕರ್ನಾಟಕ ವಿಧಾನಸಭೆ ಸಗಪೀಕರ್ ಆಗಿ ಕಿರಿಯ ವಯಸ್ಸಿನಲ್ಲಿ ಆಯ್ಕೆಯಾಗಿರೋದಕ್ಕೆ ಹೆಮ್ಮೆ ಪಡ್ತೇನೆ. ನಿಮ್ಮೆಲ್ಲರಿಗೂ ವಂದಿಸ್ತೇನೆ. ಸಿದ್ದರಾಮಯ್ಯ ಅವರಿಗೆ ವಿಪಕ್ಷ ನಾಯಕ ಬೊಮ್ಮಾಯಿ ಅವರಿಗೆ, ಡಿಸಿಎಂ ಡಿಕೆಶಿ, ಎಲ್ಲಾ ಶಾಸಕರಿಗೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಎಲ್ಲರಿಗೂ ಧನ್ಯವಾದ ಹೇಳುತ್ತೇನೆ. ಈ ಅವಕಾಶ ಸಿಕ್ಕಿದ್ದಕ್ಕೆ ಕ್ಷೇತ್ರದ ಜನರು, ಎಲ್ಲಾ ಜಾತಿ, ಧರ್ಮ, ಎಲ್ಲಾ ಧಾರ್ಮಿಕ ಮುಖಂಡರಿಗೆ ಧನ್ಯವಾದ ಹೇಳ್ತೀನಿ ಎಂದರು.
ನನ್ನ ಕ್ಷೇತ್ರದ ಜನಪ್ರತಿನಿಧಿಯಾಗಿ ಅನೇಕರು ಆಯ್ಕೆಯಾಗಿದ್ರು. ಅದನ್ನ ಉಳಿಸಿಕೊಂಡು ಹೋಗುವ ಜವಾಬ್ದಾರಿ ನನಗಿದೆ. ಸ್ಪೀಕರ್ ಆಗಿ ನಾನೊಬ್ಬನೇ ಅಲ್ಲದೆ, ಎಲ್ಲಾ ಶಾಸಕರೂ ಒಟ್ಟಿಗೆ ಕೆಲಸ ಮಾಡಬೇಕಿದೆ. ಸಂವಿಧಾನದ ಮೌಲ್ಯ ಉಳಿಸಲು ಈ ಜವಾಬ್ದಾರಿ ವಹಿಸಿಕೊಂಡಿದ್ದೇನೆ. ನಾವೆಲ್ಲರೂ ಪರಸ್ಪರ ಶತ್ರುಗಳಲ್ಲ. ನಾಡಿನ ಜನತೆಗೆ ಸೇವೆ ಮಾಡುವುದಾಗಿದೆ. ನಾಡಿನ ಜನರ ಸಮಸ್ಯೆ ಬಗ್ಗೆ ಪ್ರಸ್ತಾವನೆ ಸಲ್ಲಿಸಬೇಕು. ಅವುಗಳ ಬಗ್ಗೆ ಚರ್ಚೆ ಮಾಡಿ, ಎಲ್ಲರ ಸಮಸ್ಯೆ ಬಗೆ ಹರಿಸಬೇಕಿದೆ ಎಂದರು.
ಎಲ್ಲಾ ಪಕ್ಷದವರು ಆಯ್ಕೆಯಾಗಿ ಬಂದಿದ್ದಾರೆ. ಮೊದಲ ಬಾರಿಗೆ ಆಯ್ಕೆಯಾಗಿ ಬಂದಿದ್ದಾರೆ. ಎಲ್ಲಾ ಶಾಸಕರ ಗೌರವ ಎತ್ತಿ ಹಿಡಿಯುವ ಜವಾಬ್ದಾರಿ ನಮ್ಮ ಮೇಲಿದೆ. ನಾನು ಕಾನೂನು ಪದವೀಧರನಾಗಿ, ಅತ್ಯಂತ ಯಶಸ್ವಿಯಾಗಿ ನಿರ್ವಹಿಸಬೇಕಿದೆ. ನಾವು ಗಾಂಧಿ ಕೊಟ್ಟ, ಅಂಬೇಡ್ಕರ್ ಕೊಟ್ಟ ಮಾರ್ಗದರ್ಶನ ಪಾಲಿಸಬೇಕಿದೆ ಎಂದರು.
ಸದನದಲ್ಲಿ ಹಲವಾರು ನಾಯಕರು ಸ್ಪೀಕರ್ ಆಗಿ ನೇಮಕ ಆಗಿದ್ದಾರೆ. ಇಲ್ಲಿ ಅಖಂಡತೆಯನ್ನ, ಗೌರವವನ್ನು ಎತ್ತಿ ಹಿಡಿಯುವ ಕೆಲಸಮಾಡಬೇಕಿದೆ. ನಮ್ಮ ಕಿರಿಯರಿಗೆ ಹೇಳುವುದೇನೆಂದ್ರೆ ಹಿರಿಯರು ಹೇಳುವ ಮಾರ್ಗದರ್ಶನದಂತೆ ನಡೆಯಬೇಕು. ರೂಲ್ ಬುಕ್ ಅಧ್ಯಯನ ಮಾಡಿ. ನಾವೆಲ್ಲರೂ ಸೇರಿ ಇತಿಹಾಸ ಓದಬೇಕಿದೆ, ಹಾಗಾಗಿ ಗ್ರಂಥಾಲಯ ಬಳಕೆ ಮಾಡಿ ಎಂದು ತಿಳಿಸಿದರು.