ಬೆಳ್ತಂಗಡಿ: ಐತಿಹಾಸಿಕ ಗಡಾಯಿಕಲ್ಲಿಗೆ ಸಿಡಿಲು ಬಡಿದು ಬೆಂಕಿ ಕಾಣಿಸಿಕೊಂಡಿದೆ. ಒಂದು ತಾಸಿಗೂ ಅಧಿಕ ಕಾಲ ಗಾಳಿ ಮಳೆಯಾಗಿದ್ದು. ಸಿಡಿಲಿನ ರಭಸಕ್ಕೆ ಗಡಾಯಿಕಲ್ಲಿನಲ್ಲಿ ಕೆಲ ಕಾಲ ಬೆಂಕಿ ಕಾಣಿಸಿಕೊಂಡಿದ್ದು, ಇದನ್ನು ಸ್ಥಳೀಯರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಅಪ್ ಲೋಡ್ ಮಾಡಿದ್ದಾರೆ.
ಕಳೆದ ವರ್ಷವೂ ಸಿಡಿಲಾಘಾತದಿಂದ ಗಡಾಯಿಕಲ್ಲಿನ ಒಂದು ಪಾರ್ಶ್ವದ ಕಲ್ಲಿನ ತುಣುಕು ಬಿದ್ದು ಸ್ಫೋಟದಂತ ಸದ್ದು ಉಂಟಾಗಿ ಆತಂಕ ಮೂಡಿಸಿತ್ತು.ಇಲ್ಲಿನ ಸ್ಥಳೀಯರು. ಮಳೆಗಾಲದಲ್ಲಿ ಇದು ಸಾಮಾನ್ಯವಾಗಿದೆ ಎನ್ನುತ್ತಾರೆ