ಕಾರ್ಕಳ : ಸರ್ಕಾರದ ಯೋಜನೆಗಳನ್ನು ಪ್ರತಿ ಮನೆ ಮನೆಗೆ ತಲುಪಿಸುವ ಕಾರ್ಯ ನಾವು ಮಾಡಬೇಕಾಗಿದೆ. ಎಂದು ಉದಯ ಶೆಟ್ಟಿ ಮುನಿಯಾಲು ಹೇಳಿದರು. ರಾಜ್ಯದಲ್ಲಿ ಕಾಂಗ್ರೆಸ್ ಬಹುಮತದ ದೊರೆತ ಹಿನ್ನೆಲೆಯಲ್ಲಿ 22 ರಂದು ಕಾರ್ಕಳದಲ್ಲಿ ನಡೆದ ವಿಜಯೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಇನ್ನು ಮುಂಬರುವ ತಾಲೂಕ್ ಪಂಚಾಯತ್ ಜಿಲ್ಲಾ ಪಂಚಾಯತ್ ಚುನಾವಣೆಗೆ ನಾವು ಇಂದಿನಿಂದಲೇ ಸಿದ್ಧತೆ ನಡೆಸಬೇಕಾಗಿದೆ ಗೆಲುವಿಗಾಗಿ ಪ್ರತಿ ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಟೀಮ್ ಆಗಿ ಕಾರ್ಯನಿರ್ವಹಿಸಬೇಕಾಗಿದೆ ಎಂದು ಉದಯ ಶೆಟ್ಟಿ ಹೇಳಿದರು. ರಾಜ್ಯದ ಮತದಾರರು ಸ್ಪಷ್ಟ ಬಹುಮತದೊಂದಿಗೆ ಸುಭದ್ರ ಸರಕಾರ ರಚಿಸುವಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದ್ದಾರೆ ಕಾರ್ಕಳದಲ್ಲೂ ರಾತ್ರಿ ಹಗಲಿನದೇ ದುಡಿದಿದ್ದಾರೆ ಅವರ ಶ್ರಮ ನಮ್ಮ ಮನಸ್ಸಿನಲ್ಲಿದೆ ಎಂದು ಹೇಳಿದರು.
ಕಾರ್ಕಳ ಹಾಗೂ ಹೆಬ್ರಿ ಕ್ಕಾಂಗ್ರೆಸ್ ಮುಖಂಡರಿಂದ ಪಕ್ಷಕ್ಕೆ ತುಂಬಾ ಅನ್ಯಾಯವಾಗಿದೆ ಈ ಮಾತನ್ನು ನಾನು ಗಟ್ಟಿಯಾಗಿ ಹೇಳುತ್ತೇನೆ, ಎಂದ ಉದಯ ಶೆಟ್ಟಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರಿಗೆ ಪರೋಕ್ಷವಾಗಿ ತಿರುಗೇಟು ನೀಡಿದರು ಪ್ರಾಸ್ತಾವಿಕ ಮಾತನಾಡಿದರು. ವಿಜಯೋತ್ಸವದ ಅಂಗವಾಗಿ ಪುಲ್ಕೇರಿ ಬೈಪಾಸ್ ನಿಂದ ಜೋಡಿ ರಸ್ತೆಯಾಗಿ ಕಾಂಗ್ರೆಸ್ ಕಚೇರಿಗೆ ವಾಹನ ಜಾದ ನಡೆಯಿತು.
ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ ಕೆಪಿಸಿಸಿ ಸದಸ್ಯರಾದ ಸುರೇಂದ್ರ ಶೆಟ್ಟಿ ನೀರೆ ಕೃಷ್ಣಶೆಟ್ಟಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಶೇಖರ ಮಡಿವಾಳ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದೀಪಕ್ ಕೋಟ್ಯಾನ್ ಜಾರ್ಜ್ ಕ್ಯಾಸ್ಟಲ್ಲಿನೂ ಚಂದ್ರಹಾ ಸುವರ್ಣ ಸುಪ್ರೀತ್ ಶೆಟ್ಟಿ ಪುರಸಭಾ ಸದಸ್ಯ ಅಷ್ಪಕ ಅಹಮದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು