ಕಾರ್ಕಳ: ಕಾರ್ಕಳದ ಪ್ರಕಾಶ್ ಹೋಟೆಲ್ ಸಂಭ್ರಮ ಸಭಾಂಗಣದಲ್ಲಿ ಲೇಖಕಿ ಶ್ರೀಮತಿ ಲಾವಣ್ಯ ಪ್ರಭೆ ಅವರ ಸಾಮಾಜಿಕ ಜಾಲತಾಣ ಪ್ರತಿಲಿಪಿಯಲ್ಲಿ ಹರಿದಾಡುತಿದ್ದ ಹಲವು ಕಾದಂಬರಿಗಳಲ್ಲಿ ಒಂದಾದ ದ್ವಿದಳ ಕಾದಂಬರಿಯ ಲೋಕಾರ್ಪಣಾ ಸಮಾರಂಭವು ದಿನಾಂಕ 20.05.2023 ಶನಿವಾರದಂದು ನೆರವೇರಿತು.
ಕಾರ್ಯಕ್ರಮದಲ್ಲಿ ಖ್ಯಾತ ಪತ್ರಕರ್ತರು,ಉದಯವಾಣಿಯ ವಿಶ್ರಾಂತ ಸಹಾಯಕ ಸಂಪಾದಕರಾದ ಶ್ರೀಯುತ ಮನೋಹರ್ ಪ್ರಸಾದ್ ರವರು ಪುಸ್ತಕ ಲೋಕಾರ್ಪಣೆ ಮಾಡಿ ಕಾದಂಬರಿಯ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಅವಳಿ ಕಾದಂಬರಿಗಳು ಒಂದು ಪುಸ್ತಕದಲ್ಲಿ ಮೂಡಿಬಂದಿರುವುದು ಹೆಮ್ಮೆಯ ವಿಷಯವಾಗಿದೆ… ಇವರು ಕಾರ್ಕಳದ ಹೆಮ್ಮೆ ಎಂದು ಹೇಳಿದರು.
ಶ್ರೀಯುತ ಅಜಿತ್ ಪ್ರಸಾದ್ ರವರು ಕಾದಂಬರಿ ಅವಲೋಕನವನ್ನು ಮಾಡಿದರು. ಶ್ರೀಮತಿ ಮಿತ್ರ ಪ್ರಭಾ ಹೆಗಡೆಯವರು ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರತಿಲಿಪಿ ಸಂಪಾದಕರಾದ ಶ್ರೀಯುತ ಅಕ್ಷಯ್ ಬಾಳೆಗೆರೆಯವರು ಸಾಮಾಜಿಕ ಜಾಲತಾಣ ಪ್ರತಿಲಿಪಿ ಕೊಟ್ಟ ವೇದಿಕೆಯನ್ನು ಸಮೃದ್ಧವಾಗಿ ಶ್ರೀಮತಿ ಲಾವಣ್ಯ ಪ್ರಭೆ ಇವರು ಬಳಸಿಕೊಂಡು ಲಕ್ಷಾಂತರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ ಎಂದು ಸಾಮಾಜಿಕ ಜಾಲತಾಣ ಪ್ರತಿಲಿಪಿಯ ಕುರಿತು ತಿಳಿಸಿದರು. ಲೇಖಕಿ ಲಾವಣ್ಯ ಪ್ರಭೆ ಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.. ಶ್ರೀಮತಿ ಸಂಗೀತಾ ರವರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.