ಮಂಗಳೂರು: ಪುತ್ತೂರಿನ ಹಿಂದೂ ಸಂಘಟನೆಯ ಕಾರ್ಯಕರ್ತರ ಕೈ ಕಾಲು ಮುರಿಯುವಂತೆ ಥರ್ಡ್ ಡಿಗ್ರಿ ಶಿಕ್ಷೆ ಪ್ರಯೋಗ ಮಾಡಿದ ಪೊಲೀಸರು ಆಸ್ಪತ್ರೆಯಲ್ಲಿ ಮಲಗುವಂತೆ ಮಾಡಿದ್ದಾರೆ. ಪೊಲೀಸರ ಅತಿರೇಕದ ವರ್ತನೆಗೆ ವಜಾ ಅಲ್ಲ, ಮನೆಗೆ ಕಳಿಸುವ ಕೆಲಸವನ್ಬು ಇಲಾಖೆ ಮಾಡಬೇಕು ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ವೈ ಒತ್ತಾಯಿಸಿದ್ದಾರೆ.
ಅತ್ಯಾಚಾರವಾದರೆ, ಮಾದಕ ದ್ರವ್ಯ ಜಾಲದಲ್ಲಿ ಸಿಕ್ಕಿ ಬಿದ್ದವರಿಗೆ ಪೊಲೀಸರ ರಾಜಾತಿಥ್ಯ ಸಿಗುತ್ತದೆ. ಸನಾತನ ಧರ್ಮ ಹಿಂದುತ್ವದ ಪರ ಕೆಲಸ ಮಾಡಿದರೆ, ಇಲ್ಲವೇ ಯಾವುದೋ ದ್ವೇಷದಿಂದ ಪೊಲೀಸ್ ಇಲಾಖೆ ಲಾಠಿ ಬೀಸಿ ಕೈ ಕಾಲು ಮುರಿಯುವ ಕೆಲಸ ಮಾಡುತ್ತಿದೆ.ಹಿರಿಯ ಅಧಿಕಾರಿಗಳು ಏನು ಮಾಡುತ್ತಿದ್ದಾರೆ. ನಿಮಗೆ ತಿಳಿಯದೆ ಈ ಗಂಭೀರ ಕೃತ್ಯ ಆಗಿದೆಯೆ, ಲಾಕಪ್ ಟಾರ್ಚರ್ ವಿರುದ್ದ ಸೂಕ್ತ ತನಿಖೆ ಮಾಡಿ ತಪ್ಪಿತಸ್ಥರನ್ನು ಮನೆಗೆ ಕಳಿಸಿ, ಇತರರಿಗೆ ಇದು ಪಾಠವಾಗಬೇಕು ಎಂದು ರಾಜ್ಯದ ಪೊಲೀಸ್ ಮಹಾನಿರ್ದೇಶಕರನ್ನು ಆಗ್ರಹಿಸಿದ್ದಾರೆ.