ಉಡುಪಿ: ತಾಯಿ ಮತ್ತು ಮಗ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಿನ್ನಿಮುಲ್ಕಿಯ ಕನ್ನರ್ಪಾಡಿಯಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.ಮೃತರನ್ನು ಬ್ರಹ್ಮಬೈದರ್ಕಳ ನಗರದ ಬಾಡಿಗೆಮನೆ ನಿವಾಸಿ ಎಡ್ಲಿನ್ ಡೆಲಿಶಾ ಅಮ್ಮನ್ನ(83) ಹಾಗೂ ಅವರ ಮಗ ಸೆಬೆಸ್ಟಿನ್ ಅಮಿತ್ ಅಮ್ಮನ್ನ(46) ಎಂದು ಗುರುತಿಸಲಾಗಿದೆ.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಇವರು ಮನೆಯಲ್ಲಿ ಇಬ್ಬರೇ ವಾಸ ಮಾಡಿಕೊಂಡಿದ್ದರು. ಸೆಬೆಸ್ಟಿನ್ ಮೃತದೇಹ ಮನೆಯ ಫ್ಯಾನಿಗೆ ಮತ್ತು ಎಡ್ಲಿನ್ ಮೃತದೇಹ ಅದೇ ಕೊಠಡಿಯ ಕಿಟಕಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಐ ಮಹೇಶ್ ಪಿ.ಎಂ., ಎಎಸ್ ಐ ವಿಜಯ, ಹೆಡ್ ಕಾನ್ಸ್ ಸ್ಟೇಬಲ್ ಮರಿಗೌಡ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಅಜ್ಜರಕಾಡು ಆಸ್ಪತ್ರೆಗೆ ಸಾಗಿಸಲು ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ಸಹಕರಿಸಿದರು.