ಉಡುಪಿ: ನಗರದಲ್ಲಿ ನೀರಿನ ಅಭಾವ ತಲೆದೋರಿದ್ದು ಮೇ 19 ರಿಂದ ರೇಷನಿಂಗ್ ನಡೆಯಲಿದೆ. ಅದರಂತೆ 3 ದಿನಕ್ಕೊಮ್ಮೆ ನೀರು ಒದಗಿಸಲು ಉದ್ದೇಶಿಸಲಾಗಿದೆ.
ದುರಸ್ತಿ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಸೋಮವಾರ ಹಾಗೂ ಮಂಗಳವಾರ ನೀರು ಸರಬರಾಜು ಸ್ಥಗಿತಗೊಳಿಸಲಾಗಿದೆ. ಮೇ 17 ಹಾಗೂ 18 ರಂದು ನಿರಂತರ ನೀರು ಸರಬರಾಜು ಮಾಡಲಾಗುತ್ತದೆ.
ಮೇ 19 ರಿಂದ ಒಂದು ದಿನ ಮಣಿಪಾಲ, ಪರ್ಕಳ, ಈಶ್ವರನಗರ ಭಾಗ, ಮತ್ತೊಂದು ದಿನ ಉಡುಪಿ ನಗರ,ಅಜ್ಜರಕಾಡು, ಇಂದಿರಾನಗರ ಭಾಗ ಹಾಗೂ ಮೂರನೇ ದಿನ ಮಲ್ಪೆ, ಸಂತೆಕಟ್ಟೆ ಭಾಗಗಳಿಗೆ ನೀರು ಸರಬರಾಜು ಮಾಡಲು ನಗರಸಭೆ ಉದ್ದೇಶಿಸಿದೆ.
ಉಡುಪಿ ನಗರಕ್ಕೆ ನೀರು ಪೂರೈಸುವ ಹಿರಿಯಡಕ ಬಜೆ ಡ್ಯಾo ನಲ್ಲಿ ನೀರಿನ ಶೇಖರಣೆ ಕಳೆದೆರಡು ತಿಂಗಳಿಂದ ದಿನೇ ದಿನೇ ಕುಸಿಯುತ್ತಿದೆ.ಎರಡು ಮೂರು ದಿನಗಳ ಹಿಂದೆ ಸ್ವಲ್ಪ ಮಳೆ ಬಂದರೂ ನೀರಿನ ಸಮಸ್ಯೆ ಬಗೆಹರಿಸುವಷ್ಟ್ಟು ಮಳೆ ಬಂದಲ್ಲಿ. ಮುಖ್ಯ ವಾಗಿ ಕಾರ್ಕಳ ಮತ್ತು ಅದಕ್ಕೆ ಹೊಂದಿಕೊಂಡು ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಮಳೆಯಾದರೆ ಮಾತ್ರ ಉಡುಪಿಯಲ್ಲಿ ನೀರಿನ ಒರತೆ ಕಂಡುಬರುತ್ತದೆ.