ಉಡುಪಿ: ರಾಷ್ಟ್ರೀಯ ಹೆದ್ದಾರಿ 66 ಕಟಪಾಡಿ ಪಾಂಗಳದಲ್ಲಿ ನ್ಯಾನೋ ಕಾರು ಮತ್ತು ಡಸ್ಟರ್ ಕಾರು ಡಿಕ್ಕಿ ಹೊಡೆದು ಬೀಕರ ಆಫಗಾತ ಇಂದು ಮಧ್ಯಾಹ್ನ ಸಂಭವಿಸಿದೆ
ಅಪಘಾತದ ತೀವ್ರತೆಗೆ ನ್ಯಾನೋ ಕಾರ್ ನಲ್ಲಿದ್ದ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು ಡಸ್ಟರ್ ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎರಡು ಕಾರು ಉಡುಪಿಯಿಂದ ಕಾಪು ಕಡೆಗೆ ಹೋಗುತ್ತಿದ್ದಾಗ ಪಾಂಗಳ ಸಮೀಪ ಹಿಂದಿನಿಂದ ವೇಗವಾಗಿ ಬಂದ ಡಸ್ಟರ್ ಕಾರು ಮುಂದೆ ಸಾಗುತ್ತಿದ್ದ ನ್ಯಾನೋ ಕಾರಿಗೆ ಡಿಕ್ಕಿ ಹೊಡೆದಿದೆ
ಗಾಯಾಳುಗಳನ್ನು ತಕ್ಷಣ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಅದರಲ್ಲಿ ಒಬ್ಬರು ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಕಾಪು ಠಾಣಾ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.