ನವದೆಹಲಿ : ಪಡಿತರ ಚೀಟಿಯೊಂದಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಕೇಂದ್ರ ಸರ್ಕಾರ ಸೂಚಿಸಿದ್ದು, ಲಿಂಕ್ ಮಾಡದಿದ್ದರೆ ಪಡಿತರ ಚೀಟಿ ರದ್ದು ಮಾಡುವುದಾಗಿ ತಿಳಿಸಿದೆ. ಅದ್ರಂತೆ, ಜೂನ್ 30ರೊಳಗೆ ಪಡಿತರ ಚೀಟಿಯನ್ನ ಆಧಾರ್ ಕಾರ್ಡ್’ಗೆ ಲಿಂಕ್ ಮಾಡದಿದ್ದರೆ ಪಡಿತರ ಚೀಟಿ ತಾನಾಗಿಯೇ ರದ್ದಾಗುತ್ತದೆ.
ಜುಲೈ 1ರಿಂದ ಪಡಿತರಕ್ಕೆ ಸಿಗುವ ಉಚಿತ ಅಕ್ಕಿ ಲಭ್ಯವಾಗುವುದಿಲ್ಲ. ತಪ್ಪು ಜನರು ಪಡಿತರ ಚೀಟಿ ಪಡೆಯುವುದನ್ನ ತಪ್ಪಿಸಲು ಸರ್ಕಾರ ಈ ಕ್ರಮ ಸರ್ಕಾರ ತೆಗೆದುಕೊಂಡಿದೆ. ಇನ್ನು ಅರ್ಹರಿಗೆ ಮಾತ್ರ ಗ್ಯಾಸ್ ಅಥವಾ ಸಬ್ಸಿಡಿ ದೊರೆಯುತ್ತದೆ ಎಂದು ತಿಳಿಸಲಾಗಿದೆ.
ನಕಲು ಪಡಿತರ ಚೀಟಿಗಳು ಬರುತ್ತಿರುವುದರಿಂದ ಈ ರೀತಿಯ ಸಂಪರ್ಕ ಕಲ್ಪಿಸಿದರೆ ಅನುಕೂಲವಾಗಲಿದೆ ಎಂದು ಸರ್ಕಾರ ಮಾಹಿತಿ ನೀಡಿದೆ. ಅಲ್ಲದೇ ಆಯಾ ರಾಜ್ಯ ಸರ್ಕಾರಗಳು ಕೂಡ ಹೊಸ ಅರ್ಜಿಗಳನ್ನ ಸ್ವೀಕರಿಸಿ ತಮ್ಮ ನಿಯಮಾನುಸಾರ ಹೊಸ ಪಡಿತರ ಚೀಟಿಯನ್ನ ಜಾರಿಗೊಳಿಸುತ್ತಿವೆ. ಅದಕ್ಕಾಗಿಯೇ ಎಲ್ಲರೂ ಒಂದೇ ಆಧಾರ್ ಕಾರ್ಡ್‌ನೊಂದಿಗೆ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬೇಕು ಎಂದು ಸರ್ಕಾರ ಸೂಚಿಸಿದೆ. ಯಾರಾದರೂ ಪಡಿತರ ಚೀಟಿಯನ್ನ ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಿಸದಿದ್ದರೆ, ಬೇಗ ಮಾಡಿಸುವುದು ಉತ್ತಮ.