ಮಂಗಳೂರು: ಮಂಗಳೂರಿನ ಅಂಬೇಡ್ಕರ್ ವೃತ್ತದಲ್ಲಿರುವ ಕೆಎಂಸಿ ಹಾಸ್ಪಿಟಲ್‌ನಲ್ಲಿ ಅತ್ಯಾಧುನಿಕ ಮಕ್ಕಳ ಸಮಗ್ರ ಆರೈಕೆ ಕೇಂದ್ರ(ಕಾಂಪ್ರೆಹೆನ್ಸಿವ್ ಸೆಂಟರ್ ಫಾರ್ ಪೀಡಿಯಾಟ್ರಿಕ್ ಕೇರ್ ಉದ್ಘಾಟನೆಗೊಂಡಿತು ಸ್ಯಾಂಡಲ್‌ವುಡ್‌ನ ಖ್ಯಾತ ಸೆಲೆಬ್ರೆಟಿ ಸ್ಟೈಲಿಸ್ಟ್ ಪ್ರಗತಿ ರಿಷಬ್ ಶೆಟ್ಟಿ ಅತ್ಯಾಧುನಿಕ ಮಕ್ಕಳ ಸಮಗ್ರ ಆರೈಕೆ ಕೇಂದ್ರ(ಕಾಂಪ್ರೆಹೆನ್ಸಿವ್ ಸೆಂಟರ್ ಫಾರ್ ಪೀಡಿಯಾಟ್ರಿಕ್ ಕೇರ್ ನ್ನು ಉದ್ಘಾಟಿಸಿದರು.
ನವಜಾತ ಶಿಶು ಆರೈಕೆ, ಲಸಿಕೆಗಳು ಮತ್ತು ಉನ್ನತ ಬಹುವಿಭಾಗೀಯ ಚಿಕಿತ್ಸೆಗಳು ಹಾಗೂ ಮಕ್ಕಳ ತುರ್ತು ಸ್ಥಿತಿಗಳು ಸೇರಿದಂತೆ ವಿಸ್ತಾರವಾದ ಶ್ರೇಣಿಯ ಸೇವೆಗಳನ್ನು ಪೂರೈಸುವದರೊಂದಿಗೆ ಈ ಆಅಧುನಿಕ ಸೌಲಭ್ಯ ಮಂಗಳೂರಿನಲ್ಲಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಮಕ್ಕಳ ಆರೋಗ್ಯ ಸೇವೆಯಲ್ಲಿ ಕ್ರಾಂತಿ ಉಂಟು ಮಾಡುವ ಗುರಿ ಹೊಂದಿದೆ.
ಕೆಎಂಸಿ ಹಾಸ್ಪಿಟಲ್‌ನ ಪ್ರಾದೇಶಿಕ ಮುಖ್ಯ ಕಾರ್ಯಾಚರಣೆ ಅಧಿಕಾರಿ ಸಗೀರ್ ಸಿದ್ಧಿಬಿ ಅವರು ಮಾತನಾಡಿ, “ಕೆಎಂಸಿ ಹಾಸ್ಪಿಟಲ್‌ನಲ್ಲಿನ ಮಕ್ಕಳ ಸಮಗ್ರ ಅದ್ಯ ಕೇಂದ್ರವನ್ನು ಮಗುವಿನ ಎಲ್ಲಾ ಆರೋಗ್ಯ ಸೇವಾ ಅಗತ್ಯಗಳನ್ನು ಒಂದೇ ಸೂರಿನಡಿ ಪೂರೈಸಲು ಸಾಧ್ಯವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಉನ್ನತ ಕೌಶಲ್ಯದ ಮತ್ತು ಸಹಾನುಭೂತಿಯುಳ್ಳ ಆರೋಗ್ಯ ಸೇವಾ ವೃತ್ತಿಪರರ ತಂಡದೊಂದಿಗೆ ಮಕ್ಕಳ ಪ್ರತಿ ಹಂತದ ಬೆಳವಣಿಗೆಯಲ್ಲಿ ಅಸಾಧಾರಣ ಆರೈಕೆಯನ್ನು ಪೂರೈಸುವಲ್ಲಿ ನಾವು ಬದ್ಧರಾಗಿರುತ್ತೇವೆ. ನಿಖರ ರೋಗನಿರ್ಣಯ ಮತ್ತು ಪರಿಣಾಮಕಾರಿ ನಿರ್ವಹಣೆಗಾಗಿ ತಜ್ಞರ ತಂಡವು ಇತ್ತೀಚಿನ ರೋಗನಿದಾನ ತಂತ್ರಗಳು ಮತ್ತು ಚಿಕಿತ್ಸಾ ವಿಧಾನಗಳನ್ನು ಬಳಸುತ್ತದೆ” ಎಂದರು.
ಪ್ರಸ್ತುತ ಪೀಳಿಗೆಯ ಮಕ್ಕಳ ವೈವಿಧ್ಯಪೂರ್ಣ ಆರೋಗ್ಯ ಸೇವಾ ಅಗತ್ಯಗಳನ್ನು ಪೂರೈಸುವುದಕ್ಕಾಗಿ ಕೆಎಂಸಿ ಹಾಸ್ಪಿಟಲ್ ನ ಮಕ್ಕಳ ಸಮಗ್ರ ಅರೈಕೆ ಕೇಂದ್ರವು ಪ್ರತ್ಯೇಕವಾದ ಉಪವಿಭಾಗೀಯ ಸೇವೆಗಳನ್ನು ಒಳಗೊಂಡಿರುತ್ತದೆ. ಇವುಗಳಲ್ಲಿ ಅಲರ್ಜಿ ಮತ್ತು ಅಸ್ತಮಾ ಕ್ಲಿನಿಕ್, ಮಕ್ಕಳ ಮತ್ತು ಹದಿಹರೆಯದವರಿಗೆ ಸಮಾಲೋಚನೆ, ಮಕ್ಕಳ ಮೂತ್ರಪಿಂಡ ರೋಗಶಾಸ್ತ್ರ ಮತ್ತು ಮೂತ್ರ ರೋಗಶಾಸ್ತ್ರ, ಮಕ್ಕಳ ನಿರ್ನಾಳ ಗ್ರಂಥಿ ಶಾಸ್ತ್ರ, ಮಕ್ಕಳ ನೇತ್ರ ಸನ ಶಾಸ್ತ್ರ, ಮಕ್ಕಳ ಕ್ಯಾನ್ಸರ್ ಅರೈಕೆ ಮಕ್ಕಳ ತುರ್ತು ಚಿಕಿತ್ಸೆ ಮತ್ತು ಮಕ್ಕಳ ತೀವ್ರ ನಿಗಾ ಘಟಕ ಮುಂತಾದ ಸೇವೆಗಳು ಸೇರಿವೆ. ವಿಶೇಷ ತಜ್ಞರ ತಂಡ ಮತ್ತು ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಮಕ್ಕಳ ಆರೋಗ್ಯ ಸೇವೆಯಲ್ಲಿ ನೂತನ ಹೆಗ್ಗುರುತುಗಳನ್ನು ನಾವು ಸಾಧಿಸುವ ವಿಶ್ವಾಸ ಹೊಂದಿದ್ದೇವೆ.
ಮಾಹ, ಮಂಗಳೂರು ಕ್ಯಾಂಪಸ್ ಪ್ರೊವೈಸ್ ಚಾನ್ಸಲರ್ ಡಾ. ದಿಲೀಪ್ ನಾಯಕ್ ಅವರು ಈ ಸಂದರ್ಭದಲ್ಲಿ ಮಾತನಾಡಿ, ಮಕ್ಕಳ ದೈಹಿಕ, ಭಾವನಾತ್ಮಕ ಮತ್ತು ಬೆಳವಣಿಗೆಯ ಯೋಗಕ್ಷೇಮ ಸೇರಿದಂತೆ ಸಂಪೂರ್ಣ ಮತ್ತು ಬಹು ಆಯಾಮದ ಆರೈಕೆಯನ್ನು ಮಕ್ಕಳಿಗೆ ಪೂರೈಸುವ ಗುರಿಯನ್ನು ನಾವು ಹೊಂದಿದ್ದೇವೆ ಇಲ್ಲಿ ಮಕ್ಕಳು ತಮ್ಮ ಆರೋಗ್ಯದ ಎಲ್ಲಾ ವಿಷಯಗಳಲ್ಲಿ ಅತ್ಯುನ್ನತ ಗುಣಮಟ್ಟದ ಆರೈಕೆ ಪಡೆಯುವರು ಎಂದರು.
ಸ್ಯಾಂಡಲ್‌ವುಡ್‌ನ ಖ್ಯಾತ ಸೆಲೆಬ್ರಿಟಿ ಸ್ಟೈಲಿಸ್ಟ್ ಆದ ಪ್ರಗತಿ ರಿಷಬ್ ಶೆಟ್ಟಿ ಅವರು ಮಾತನಾಡಿ, “ಮಂಗಳೂರಿನಲ್ಲಿ ಈ ರೀತಿಯ ಮೊದಲ ಸಮಗ್ರ ಮಕ್ಕಳ ಆರೈಕೆ ಕೇಂದ್ರವನ್ನು ಉದ್ಘಾಟಿಸುವುದು ಒಂದು ಅದ್ಭುತವಾದ ಅನುಭವವಾಗಿದೆ. ತಾಯಿಯರ ದಿನದ ಅಂಗವಾಗಿ ಮತ್ತು ಸ್ವತಃ ಒಬ್ಬ ತಾಯಿಯಾಗಿ ಮಕ್ಕಳಿಗೆ ಸಂಪೂರ್ಣ ಆರೋಗ್ಯ ಸೇವಾ ಸೌಲಭ್ಯಅಂಬೇಡ್ಕರ್ ವೃತ್ತದಲ್ಲಿನ ಕೆಎಂಸಿ ಹಾಸ್ಪಿಟಲ್‌ನಲ್ಲಿ ಒಂದೇ ಸೂರಿನಡಿ ಲಭ್ಯವಿರುವುದು ನನಗೆ ಹರ್ಷದ ವಿಷಯವಾಗಿದೆ. ಚಿಕಿತ್ಸೆಯ ಸಂದರ್ಭದಲ್ಲಿ ಮಕ್ಕಳ ಮನಸ್ಸನ್ನು ಉಲ್ಲಾಸದಿಂದ ಇಡುವುದಕ್ಕಾಗಿ ಮತ್ತು ಸಂಪೂರ್ಣ ವೈದ್ಯಕೀಯ ಪ್ರಕ್ರಿಯೆಯನ್ನು ಹೆಚ್ಚು ಅನುಕೂಲಕರ ಮತ್ತು ಸುಲಭವಾಗಿಸುವುದಕ್ಕಾಗಿ ನವೀನ ಕ್ರಮದ ರೂಪದಲ್ಲಿ ಸಂವಾದಯುತ ಆಟದ ಪ್ರದೇಶವನ್ನು ಇಲ್ಲಿ ಅಳವಡಿಸಲಾಗಿದ್ದು, ಇದಕ್ಕೆ ಬಹಳಷ್ಟು ಪ್ರಶಂಸೆ ಲಭಿಸಿದೆ” ಎಂದರು.