ಕಾರ್ಕಳ : ಕಾರ್ಕಳ ಚುನಾವಣೆ ಸೋಲು ತುಂಬಾ ಬೇಸರವನ್ನು ಉಂಟುಮಾಡಿದೆ.ಸೋಲಿನಿಂದ ಕಾರ್ಯಕರ್ತರು ದೃತಿಗೆಡಬೇಕಿಲ್ಲ ಮುಂದಿನ ದಿನಗಳಲ್ಲಿ ಉತ್ತಮ ಕೆಲಸಗಳನ್ನು ಮಾಡೋಣ ನಾನು ಸದಾ ನಿಮ್ಮೊಂದಿಗೆ ಇದ್ದೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಹೇಳಿದರು
ಕಾರ್ಕಳದ ಚುನಾವಣಾ ಕಚೇರಿಯಲ್ಲಿ ಮಾತನಾಡಿದ ಅವರು ಗೆಲುವಿನ ವಿಶ್ವಾಸ ನಮ್ಮಲ್ಲಿತ್ತು. ಆದರೆ ಕಾರ್ಕಳದಲ್ಲಿ ಬಿಜೆಪಿಯವರು ಹಣ ಹೆಂಡ ಹಂಚಿ ಅಡ್ಡದಾರಿಯ ಮೂಲಕ ಗೆಲುವನ್ನು ಸಾಧಿಸಿದ್ದಾರೆ ರಾಜ್ಯದಲ್ಲಿ ಕಾಂಗ್ರೆಸ್ಸಿಗೆ ಬಹುದೊಡ್ಡ ಮಟ್ಟದಲ್ಲಿ ಬೆಂಬಲ ದೊರೆತಿದ್ದು ಕಾಂಗ್ರೆಸ್ ಘೋಷಿಸಿದ ಗ್ಯಾರಂಟಿಗಳನ್ನು ಎಲ್ಲರಿಗೂ ತಲುಪಿಸುವ ಕೆಲಸವನ್ನು ಕಾರ್ಯಕರ್ತರ ಮೂಲಕ ನಡೆಸಲಿದ್ದೇವೆ ಎಂದು ಹೇಳಿದರು
ಪ್ರಚಾರ ಸಮಿತಿಯ ಅಧ್ಯಕ್ಷ ಶುಭದರಾವ್ ಮಾತನಾಡಿ ಕೇವಲ ಪತ್ರಿಕೆಗಳಲ್ಲಿ ಶಾಸಕರ ಅಭಿವೃದ್ಧಿಯ ಮಾತುಗಳಿದ್ದು ಕಳೆದ ಬಾರಿಗಿಂತ ಈ ಬಾರಿ ಜಯದ ಅಂತರ ಕಡಿಮೆಯಾಗಿದೆ ಕ್ಷೇತ್ರದಲ್ಲಿ ಅಡ್ಡ ಮತದಾನವೂ ಆಗಿದೆ ಇದರಿಂದ ಶಾಸಕರು ಆತ್ಮ ವಿಮರ್ಶೆ ಮಾಡಿಕೊಳ್ಳಬೇಡಿ ಮುಂದಿನ ದಿನಗಳಲ್ಲಿ ಕಾರ್ಕಳದಲ್ಲಿ ಮತ್ತೆ ಕಾಂಗ್ರೆಸ್ ಗೆಲ್ಲಲಿದೆ ಎಂದು ಹೇಳಿದರು
ಈ ಸಂದರ್ಭ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ ಪುರಸಭಾ ಮಾಜಿ ಅಧ್ಯಕ್ಷ ಸುಭೀತ್ ಎನ್ ಆರ್ ಪುರಸಭಾ ಸದಸ್ಯ ಅಶ್ಪಕ್ ಅಹಮದ್ ಇನ್ನ ಪಂಚಾಯತ್ ನ ಅಧ್ಯಕ್ಷ ಕುಷಾ ಮೂಲ್ಯ ಗಿರೀಶ್ ಶೆಟ್ಟಿ ಪ್ರಕಾಶ್ ಶೆಟ್ಟಿ ಉದಯಶೆಟ್ಟಿ ಕಾಂತಿ ಶೆಟ್ಟಿ ಉಪಸ್ಥಿತರಿದ್ದರು