ಉಡುಪಿ: ಕಾಂಗ್ರೆಸ್ ಅಭ್ಯರ್ಥಿಯ ತೀವ್ರ ಹೋರಾಟ ಮತ್ತೊಂದೆಡೆ ಗುರು ಪ್ರಮೋದ್ ಮುತಾಲಿಕ್ ಸ್ಪರ್ಧೆಯ ಹೊರತಾಗಿಯೂ ಕಾರ್ಕಳ ವಿಧಾನಸಭೆ ಕ್ಷೇತ್ರದಲ್ಲಿ ಪವರ್ ಮಿನಿಸ್ಟರ್ ವಿ ಸುನೀಲ್ ಕುಮಾರ್ ಅವರು ತಮ್ಮ ಕ್ಷೇತ್ರ ಉಳಿಸಿಕೊಂಡಿದ್ದಾರೆ.
ಚುನಾವಣೆ ಘೋಷಣೆಗೂ ಮೊದಲೇ ಪ್ರಮೋದ್ ಮುತಾಲಿಕ್ ಅವರ ಸ್ಪರ್ಧೆಯ ಕಾರಣದಿಂದ ರಾಜ್ಯದ ಕುತೂಹಲಕ್ಕೆ ಕಾರಣವಾಗಿದ್ದ ಕಾರ್ಕಳ ಕ್ಷೇತ್ರದಲ್ಲಿ ಕೊನೆಗೂ ಸುನೀಲ್ ಕುಮಾರ್ ಗೆಲುವಿನ ನಗೆ ಬೀರಿದ್ದಾರೆ.
ಮೊದಲ ಬಾರಿ ಟಿಕೆಟ್ ಪಡೆದಿದ್ದ ಕಾಂಗ್ರೆಸ್ ಅಭ್ಯರ್ಥಿ ಮುನಿಯಾಲು ಉದಯ ಶೆಟ್ಟಿ ಅವರು ಸಚಿವ ಸುನಿಲ್ ಗೆ ಭರ್ಜರಿ ಫೈಟ್ ನೀಡಿದ್ದರು. ಆದರೆ ಪ್ರಮೋದ್ ಮುತಾಲಿಕ್ ಅವರಿಂದ ನಿರೀಕ್ಷಿತ ಫೈಟ್ ಬರಲಿಲ್ಲ