ಮಣಿಪಾಲ: ಹಾವಂಜೆ, ಕೀಳಂಜೆಯ ಪರಿಸರದಲ್ಲಿ ಸಾಕು ನಾಯಿಗಳನ್ನು ತಿನ್ನುವ ಚಿರತೆಯ ಕಾಟ ಹೆಚ್ಚಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.ಸ್ಥಳೀಯರಾದ ಗಣಪತಿ ನಾಯಕ್, ಜಯಶೆಟ್ಟಿ ಬನ್ನಂಜೆ ಅವರ ಮನೆಯಲ್ಲಿ ಸಾಕಿದ ಸಾಕುನಾಯಿಗಳ ಮೇಲೆ ಚಿರತೆಯು ರಾತ್ರಿಯ ಹೊತ್ತಿನಲ್ಲಿ ದಾಳಿ ನಡೆಸಿದೆ.
ಈ ಪರಿಸರದಲ್ಲಿ ಅರಣ್ಯ ಇಲಾಖೆಯ ಅಕೇಶಿಯ ಮರದ ತೋಪುಗಳಿದ್ದು, ಸಾಕಷ್ಟು ಮನೆಗಳಿವೆ. ಈ ಹಿಂದೆ ಇಲ್ಲಿನ ನಾಗರಿಕರು ಕಾಡು ಕೋಣ ಹಾವಳಿಯಿಂದ ಸಮಸ್ಯೆ ಅನುಭವಿಸಿದ್ದರು. ಪ್ರಸ್ತುತ ಚಿರತೆಯ ಹಾವಳಿಯಿಂದ ಸ್ಥಳೀಯರು ಆತಂಕಿತರಾಗಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ನಾಗರಿಕರು ಆಗ್ರಹಿಸಿದ್ದಾರೆ.