ಮಣಿಪಾಲ : ಮದುಮಗ ಸಂಭ್ರಮದ ನಡುವೆ ಬಿಡುವು ಮಾಡಿಕೊಂಡು ಹಕ್ಕು ಚಲಾಯಿಸಿ ಮಾದರಿಯಾಗಿದ್ದಾರೆ. ಸರಳೇಬೆಟ್ಟುವಿನಲ್ಲಿ ಮದುವೆ ಮಂಟಪದಿಂದ ಬಂದು ಶಿವರಾಜ್ ಅನಂತ ಕುಲಾಲ್ ಹಕ್ಕು ಚಲಾಯಿಸಿದ್ದಾರೆ. ಸರಳೇ ಬೆಟ್ಟುವಿನ ವಿಜಯ ನಗರ ನಿವಾಸಿಯಾಗಿರುವ ಶಿವರಾಜ್ ಮದುವೆ ಮಂಟಪದಿಂದ ಪತ್ನಿ ಸಮೇತವಾಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಗೆ ಬಂದು ಮತದಾನ ಮಾಡಿದರು. ಶಿವರಾಜ್ ಅವರಿಗೆ ಹಲವರು ಶುಭ ಕೋರಿ ಪ್ರಶಂಸೆ ವ್ಯಕ್ತಪಡಿಸಿದರು.