ಉಡುಪಿ: ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದಲ್ಲಿ ಬೆಳಿಗ್ಗೆಯಿಂದಲೇ ಮತದಾನ ಆರಂಭಗೊಂಡಿದ್ದು ಮತದಾರರು ಮತಗಟ್ಟೆಗಳಿಗೆ ಬಂದು ಸರತಿ ಸಾಲಿನಲ್ಲಿ ನಿಂತು ಹಕ್ಕನ್ನು ಚಲಾಯಿಸಿದರು .
ಉಡುಪಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಶ್ ಪಾಲ್ ಸುವರ್ಣ ಉಡುಪಿ ನಗರದ ಅಜ್ಜರಕಾಡು ವಾರ್ಡಿನಲ್ಲಿರುವ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಬೂತ್ ನಂಬರ್ 188 ರಲ್ಲಿ ಮತದಾನ ಮಾಡಿದರು
ಇನ್ನು ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ ಅವರು ಪತ್ನಿ ಜೊತೆಗೆ ಆಗಮಿಸಿ ಬಡನಿಡಿಯೂರು ಸನ್ಯಾಸಿ ಮಠದ ಬಳಿ ಇರುವ ಬೂತ್ ನಲ್ಲಿ ಮತ ಚಲಾಯಿಸಿದರು
ಕಾಪು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಉಡುಪಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ತಮ್ಮ ಹಕ್ಕನ್ನು ಪತ್ನಿ ಮತ್ತು ಪುತ್ರನ ಜೊತೆಗೆ ಆಗಮಿಸಿ ಚಲಾಯಿಸಿದರು.