ಉಡುಪಿ: ಉಡುಪಿಯಲ್ಲಿ 18 ಸಾವಿರ ಯುವ ಮತದಾರರಿದ್ದು, ಅವರ ಗಮನ ಸೆಳೆಯಲು ಉಡುಪಿಯ ನಿಟ್ಟೂರು ಮತಗಟ್ಟೆಯಲ್ಲಿ ವಿಶೇಷ ಕಮಾನುಗಳನ್ನು ಸಿದ್ಧಪಡಿಸಲಾಗಿದೆ.
ಕರ್ನಾಟಕ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಶುರುವಾಗಿದೆ. ಮತದಾನಕ್ಕೆ ಉಡುಪಿ ಸಜ್ಜಾಗಿದ್ದು, ಮತಗಟ್ಟೆಗಳು, ಸಖಿ ಭೂತ್‌ಗಳು ಸಿದ್ಧಗೊಂಡಿವೆ. ಹೀಗಾಗಿ ಮತದಾರರಿಗೆ ಜಾಗೃತಿ ಮೂಡಿಸುವ ಕೆಲಸಗಳು ಆಗ್ತಿವೆ
ಉಡುಪಿಯಲ್ಲಿ ಈ ಬಾರಿ 18 ಸಾವಿರ ಯಂಗ್ ವೋಟರ್ಸ್ ಹಕ್ಕು ಚಲಾಯಿಸುತ್ತಿದ್ದಾರೆ. ಯುವ ಮತದಾರರನ್ನು ಸೆಳೆಯಲು ವೀಪ್ ಸಂಸ್ಥೆ ಜಿಲ್ಲೆಯ ಅಲ್ಲಲ್ಲಿ ಯುವ ಮತಗಟ್ಟೆಗಳನ್ನ ಸಿದ್ಧ ಮಾಡಿದೆ. ಕ್ರಿಕೆಟ್ ಪೋಸ್ಟರ್ಸ್ , ಕ್ರಿಕೆಟ್ ಆರ್ಟ್ ಮಾಡಿ ಯುವಕರನ್ನು ಸೆಳೆಯುವ ಸಿದ್ಧತೆ ಮಾಡಿಕೊಂಡಿದೆ.
ರಾಜ್ಯಾದ್ಯಂತ ವಿವಿಧ ರೀತಿ ವಿಷಯಾಧಾರಿತ ಮತಗಟ್ಟೆಗಳನ್ನ ಸಿದ್ಧಪಡಿಸಿ ಗಮನ ಸೆಳೆಯಲಾಗುತ್ತಿದೆ. ಹಾಗೆಯೇ ಉಡುಪಿ ಜಿಲ್ಲೆಯಲ್ಲಿ ಕ್ರಿಕೆಟ್ ಅಭಿಮಾನಿಗಳಲ್ಲಿ ಮತದಾನ ಜಾಗೃತಿ ಮೂಡಿಸಲು ಒಳ್ಳೆ ಪ್ಲಾನ್ ಮಾಡಿದ್ದು, ರಾಹುಲ್ ದ್ರಾವಿಡ್ ಸ್ವಾಗತ ಕಮಾನುಗಳನ್ನು ನಿರ್ಮಿಸಲಾಗಿದೆ.