ಕಾರ್ಕಳ:ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಕಾವೇರಿದೆ. ಕಾರ್ಕಳ ವಿಧಾನ ಸಭಾ ಕ್ಷೇತ್ರದಲ್ಲಿ ಸೋಮವಾರ 6 ಘಂಟೆ ವೇಳೆಗ ಚುನಾವಣಾ ಬಹಿರಂಗ ಪ್ರಚಾರ ಅಂತಿಮವಾಗಿದೆ. ಮೆ.10 ರಂದು ನಡೆಯಲಿರುವ ಕಾರ್ಕಳ ವಿಧಾನ ಸಭಾ ಕ್ಷೇತ್ರದ ಚುನಾವಣಾ ಪೂರ್ವ ತಯಾರಿ ಇಲ್ಲಿದೆ
ಕಾರ್ಕಳ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ209 ಬೂತ್ ಗಳಿವೆ. ಅದರಲ್ಲಿ ಪುರುಷ 91435 ಮತದಾರರಿದ್ದು , 99142 ಮಹಿಳಾ ಮತದಾರರಿದ್ದು ಒಟ್ಟು 190611 ಮತದಾರರು ಮತ ಚಲಾಯಿಸಲಿದ್ದಾರೆ.
ಮತಗಟ್ಟೆ ಚಿತ್ರಣ : ಕಾರ್ಕಳ ವಿಧಾನ ಸಭಾ ವ್ಯಾಪ್ತಿಯಲ್ಲಿ 209 ಮತಗಟ್ಟೆ ಗಳಲ್ಲಿ ಕ್ರಿಟಿಕಲ್ ಮತಗಟ್ಟೆಸೇರಿದಂತೆ ವಿಡಿಯೊ ಗ್ರಫಿ , ಮೈಕ್ರೋ ಅಬ್ಸರ್ವರ್, ವೆಬ್ ಕಾಸ್ಟಿಂಗ್, ಸೇರಿದಂತೆ ಒಟ್ಟು 12 ವಿಭಾಗಗಳಾಗಿ ವಿಂಗಡಿಸಲಾಗಿದ್ದು ವಿವಿಧ ಸ್ಥರಗಳಲ್ಲಿ ಭದ್ರತೆ ಹಾಗೂ ಪರಿಣತ ಅಧಿಕಾರಿಗಳ ತಂಡವನ್ನು ನಿಯೋಜಿಸಲಾಗಿದೆ.
ಕಾರ್ಕಳ ವಿಧಾನ ಸಭಾ ಕ್ಷೇತ್ರದಲ್ಲಿ ವಿಕಲಚೆತನರು ಹಾಗು ಕೋರಿಕೆ ಮೇರೆಗೆ ಸಖಿ ಮತಗಟ್ಟೆ – 5: ಪಿಡಬ್ಲುಡಿ ಮತಗಟ್ಟೆ -1 , ಯುವ ಮತಗಟ್ಟೆ -1 , ವಿಷಯವಾರು ಮತಗಟ್ಟೆ 1 ತೆರೆಯಲಾಗಿದೆ .
ವಾಹನಗಳ ವ್ಯವಸ್ಥೆ ಹಾಗು ಸಿಬ್ಬಂದಿಗಳು: ವಿಧಾನ ಸಭಾ ಕ್ಷೇತ್ರ ದಲ್ಲಿ ಚುನಾವಣಾ ಕರ್ತವ್ಯ ದಲ್ಲಿ ಕಾರ್ಯನಿರ್ವಹಿಸಲು , 31 ಬಸ್ಸುಗಳು ಸೇರಿದಂತೆ ಒಟ್ಟು 58 ವಾಹನಗಳು ಬಳಕೆ ಮಾಡಲಾಗುತ್ತಿದೆ, ಚುನಾವಣಾ ಕರ್ತವ್ಯ ನಿರ್ವಹಿಸಲು ಪಿ. ಅರ್ ಒ . ಗ್ರೂಪ್ ಡಿ , ಬಿ ಎಲ್ ಒ, ಸೂಕ್ಷ್ಮ ಪರಿಣಿತರು ಸೇರಿದಂತೆ ಒಟ್ಟು 1504 ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಲಿದ್ದಾರೆ
ಇವಿಯಂ ಹಾಗೂ ವಿವಿ ಪ್ಯಾಟ್ ವ್ಯವಸ್ಥೆ: ವಿಧಾನ ಸಭಾ ಚುನಾವಣಾ ಕ್ಷೇತ್ರಕ್ಕಾಗಿ ಬ್ಯಾಲೆಟ್ ಯುನಿಟ್: 209 ( 49 ಮೀಸಲು) ,ಕಂಟ್ರೋಲ್ ಯುನಿಟ್ : 209 (49 ಮೀಸಲು) ವಿವಿ ಪ್ಯಾಟ್ 279 ಮತಯಂತ್ರಗಳನ್ನು ಬಳಸಲಾಗುತ್ತಿದೆ.
ಚುನಾವಣಾ ಮಸ್ಟರಿಂಗ್ ಹಾಗೂ ಡಿ ಮಾಸ್ಟರಿಂಗ್ ಕೆಂದ್ರವಾಗಿ ಕಾರ್ಕಳ ಕಾಬೆಟ್ಟು ಸಮೀಪದ ಮಂಜುನಾಥ ಪೈ ಮೆಮೊರಿಯಲ್ ಪ್ರಥಮ ದರ್ಜೆ ಕಾಲೇಜನ್ನು ಅಯ್ಕೆ ಮಾಡಲಾಗಿದ್ದು , ಸಂಪೂರ್ಣ ಭದ್ರತೆ ನೀಡಲಾಗಿದೆ.
ಅಂಚೆ ಮತದಾನದ ವಿವರ : ಕಾರ್ಕಳ ವಿಧಾನ ಸಭಾ ವ್ಯಾಪ್ತಿಯಲ್ಲಿ ಒಟ್ಟು ಮತದಾರರಲ್ಲಿ1110 ಮತ ಅಂಚೆ ಮತದಾನಕ್ಕೆ ನೊಂದಾಯಿತ ಗೊಂಡಿದ್ದು 80 ವರ್ಷ ಮೇಲ್ಪಟ್ಟ 903 ಮತದಾರರಲ್ಲಿ 878 ಮತದಾರರು ಮತಚಲಾಯಿಸಿದ್ದಾರೆ . ವಿಕಲಚೇತನ 205 ಮತಗಳಗಳಲ್ಲಿ ಎಲ್ಲಾ ಮತಗಳು ಚಲಾವಣೆಯಾಗಿದ್ದು,ವಿವಿದೆಡೆ ಸೇವೆ ಯಲ್ಲಿರುವ ಎರಡು ಮತಗಳು ಚಲಾವಣೆ ಮಾಡಲಾಗಿದೆ . 25 ಮತದಾನಗಳು ಚಲಾವಣೆ ಯಾಗಿಲ್ಲ . ಚುನಾವಣಾ ಕರ್ತವ್ಯ ಸಿಬ್ಬಂದಿ ಗಳಲ್ಲಿ 1040 ಮಂದಿ ಮತದಾರಿದ್ದು ಅದರಲ್ಲಿ425 ಮತಗಳು ಚಲಾವಣೆಯಾಗಿವೆ.
ಆರೋಪಗಳು, ಪ್ರಕರಣಗಳು:
ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಆರೋಪದ ಕ್ಷೆತ್ರದ ವ್ಯಾಪ್ತಿಯಲ್ಲಿನ ಠಾಣೆಗಳಲ್ಲಿ 3 ಎಫ್ ಐ ಆರ್ ಗಳನ್ನು ದಾಖಲಿಸಲಾಗಿದೆ. ಚೆಕ್ ಪೋಸ್ಟ್ ಗಳಲ್ಲಿ 54,62900 ನಗದನ್ನು ವಶಪಡಿಸಲಾಗಿದ್ದು ,36.54 ಲೀ ಮಧ್ಯವನ್ನು ವಶಪಡಿಸಿ ಕೊಳ್ಳ ಲಾಗಿದೆ.