ಉಡುಪಿ : ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ವತಿಯಿಂದ ಸುಸ್ಥಿರ ಭವಿಷ್ಯಕ್ಕಾಗಿ “ಹಸಿರು ನಗರಗಳು” ಎಂಬ ವಿಷಯದ ಕುರಿತು ಪದವಿ ಮತ್ತು ಸ್ನಾತಕೋತ್ತರ ವಿಜ್ಞಾನ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಕನ್ನಡ ಹಾಗೂ. ಇಂಗ್ಲೀಷ್ ನಲ್ಲಿ ಪ್ರಬಂಧ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಪ್ರಬಂಧ ಸಲ್ಲಿಸಲು ಜೂ.1 ಕೊನೆಯ ದಿನ. ಪ್ರಬಂಧಗಳು 1,000 ಪದ ಮೀರುವಂತಿಲ್ಲ. ಪಿಡಿ ಎಫ್ ಫಾರ್ಮ್ಯಾಟ್ ನಲ್ಲಿ ಪ್ರಬಂಧಗಳನ್ನು ಕಳುಹಿಸಬೇಕು.
ಪ್ರಬಂಧದ ಜತೆ ಕಾಲೇಜಿನ ಗುರುತಿನ ಚೀಟಿ ಸಲ್ಲಿಸಬೇಕು. ಮಾಹಿತಿಗೆ Kstacademy.in ಅಥವಾ ದೂ: 080-29721550 ಸಂಪರ್ಕಿಸಲು ಅಕಾಡೆಮಿಯ ಸಿಇಒ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.