ಕಾರ್ಕಳ : ಕಾರ್ಕಳ ಮಾರಿಗುಡಿಯ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಭಕ್ತರು ಹಾಗೂ ದಾನಿಗಳ ಸಹಕಾರದಲ್ಲಿ ಯಶಸ್ವಿಯಾಗಿ ನಡೆದಿತ್ತು. ಸುನಿಲ್ ಕುಮಾರ್ ಮತ್ತು ಅವರ ಬೆಂಬಲಿಗರು ದೇವಳದ ಜೀರ್ಣೋದ್ಧಾರಕ್ಕೆ ತಾವೇ ಕಾರಣ ಎನ್ನುತ್ತಿದ್ದಾರೆ ಇದನ್ನು ಒಪ್ಪಲು ಸಾಧ್ಯವಿಲ್ಲ , ಜೀರ್ಣೋದ್ಧಾರಕ್ಕೆ ಬಿಜೆಪಿ ಸರಕಾರದಿಂದ ಬಂದಿರುವ ಅನುದಾನ ಎಷ್ಟು? ತಾವು ಮತ್ತು ಮುಜರಾಯಿ ಸಚಿವರು ಭಾಷಣದಲ್ಲಿ ಹೇಳಿದ ಅನುದಾನ ಬಿಡುಗಡೆಯಾಗಿದೆಯೇ ? ಎಂದು ಸುನಿಲ್ ಕುಮಾರ್ ಅವರನ್ನ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಶುಭದರಾವ್ ಇಂದು ಮೇ 5 ಪ್ರಕಾಶ್ ಹೋಟೆಲ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದ್ದಾರೆ.
ಧಾರ್ಮಿಕ ಕೇಂದ್ರಗಳು ಭಕ್ತರ ಆಸ್ತಿ ಹೊರತು ಪಕ್ಷದ ಆಸ್ತಿಯಲ್ಲ ಆದರೆ ಸುನಿಲ್ ಕುಮಾರ್ ದೇವಸ್ಥಾನಗಳ ಹೆಸರಿನಲ್ಲಿ ಮತಯಾಚನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಜ್ಯದಲ್ಲಿ ಅವರದ್ದೇ ಸರಕಾರವಿದ್ದು ದೇವಸ್ಥಾನಕ್ಕೆ ಬೇಕಾಗಿರುವ ಕೋಟ್ಯಂತರ ರೂಪಾಯಿಯ ಮರಗಳನ್ನು ಅರಣ್ಯ ಇಲಾಖೆಯಿಂದ ಪಡೆಯುವ ಅವಕಾಶವಿದ್ದರೂ ಅದನ್ನು ಪಡೆಯದೆ ಸುನಿಲ್ ಕುಮಾರ್ ಮಿತ್ರನ ಮರದ ಮಿಲ್ಲಿನಿಂದಲೇ ಪಡೆಯಲು ಮತ್ತು ಅನುವಂಶಿಕ ಹಿರಿಯ ಆಡಳಿತ ಮುಖ್ಯಸ್ಥರ ಪೂಜೆಗೆ ಕುಳ್ಳಿರಿಸದಿರಲು ಹಾಗೂ ಉದ್ದೇಶಿತ ಮಾರಿಯಮ್ಮ ಸಭಾಭವನ ಜಾಗವನ್ನು ತಮ್ಮ ಮಿತ್ರನಿಗೆ ಕಾನೂನುಬಾಹಿರಬಾಗಿ 99 ವರ್ಷಕ್ಕೆ ಲೀಸ್ ನಲ್ಲಿ ನೀಡಲು ಕಾರಣವೇನು ?ಎಂದು ಪ್ರಶ್ನಿಸಿದ್ದಾರೆ
ಮುಜರಾಯಿ ಇಲಾಖೆಯ ಅನುಮತಿ ಇಲ್ಲದೆ ತೆಗೆದ ಮಾರಿಗುಡಿಯ ಜೀರ್ಣೋದ್ಧಾರ ಹುಂಡಿಯ ಹಣದ ಲೆಕ್ಕವನ್ನು ನೀಡಿಲ್ಲ ಮತ್ತು ಬ್ರಹ್ಮಕಲಶೋತ್ಸವದ ನಂತರ ನಡೆಯುವ ದೃಢ ಕಲಶ ಕಾರ್ಯಕ್ರಮಕ್ಕೆ ಹಗಲು ರಾತ್ರಿ ದುಡಿದ ಕಾರ್ಯಕರ್ತರನ್ನು ಆಹ್ವಾನಿಸಿಲ್ಲ ಎಂದು ಅವರು ಮಾರಿಗುಡಿಯ ಹೊರ ಆವರಣದಲ್ಲಿದ್ದ ಅಂಗಡಿಗಳನ್ನು ಕೆಡಹಿ ಅವರನ್ನು ಬೀದಿ ಪಾಲು ಮಾಡಿದ್ದಲ್ಲದೆ ಅವರಿಗೆ ಇನ್ನೂ ಪರ್ಯಾಯ ವ್ಯವಸ್ಥೆ ಕಲ್ಪಿಸದಿರಲು ಕಾರಣವೇನು ಎಂದು ಕೇಳಿದರು
ಪೆರ್ವಾಜೆ ಮಹಾಲಿಂಗೇಶ್ವರ ದೇವಳದ ಜಾಗದಲ್ಲಿ ಸುನಿಲ್ ಕುಮಾರ್ ಮತ್ತು ಅವರ ಬೆಂಬಲಿಗರು ಭೂ ವ್ಯವಹಾರ ನಡೆಸುತ್ತಿದ್ದಾರೆ ಇನ್ನು ಪಡುತ್ತಿರುವ ಶ್ರೀ ವೆಂಕಟರಮಣ ದೇವಳದ ರಥಬೀದಿಯ ಒಳಚರಂಡಿ ಕಾಮಗಾರಿ ಕಳಪೆಯಾಗಿದೆ ಎಂದು ಗೊತ್ತಿದ್ದರೂ ಕೋಟ್ಯಂತರ ರೂಪಾಯಿ ಬಿಲ್ಲು ಪಾವತಿಸಿದ್ದು ಯಾಕೆ?? ಪರಶುರಾಮ ಥೀಂ-ಪಾರ್ಕ್ನಲ್ಲಿ ತುಳುನಾಡಿನ ನಂಬಿಕೆಯ ದೈವ ದೇವರನ್ನುಅವಮಾನಿಸಿರುವ ಹಿಂದೆ ನಿಮ್ಮ ಉದ್ದೇಶ ಏನು ? ಸತ್ಯಾಸತ್ಯತೆ ತಿಳಿದ ಬಳಿಕವೂ ಅದನ್ನು ಸರಿಪಡಿಸದೆ ಮೌನವಾಗಿರಲು ಕಾರಣವೇನು?ಎಂದು ಪ್ರಶ್ನಿಸಿದ್ದಾರೆ
ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ಸುರೇಂದ್ರ ಶೆಟ್ಟಿ ಮತ್ತು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ ಉಪಸ್ಥಿತರಿದ್ದರು
.