ಸ್ಮಾರ್ಟ್ಫೋನ್ ತಯಾರಿಕಾ ಕಂಪನಿಗಳಲ್ಲಿ ಭಾರೀ ಮುಂಚೂಣಿಯಲ್ಲಿರುವ ಕಂಪನಿಯೆಂದರೆ ಅದು ಆ್ಯಪಲ್ ಕಂಪನಿ.
ಭಾರತದಲ್ಲಿ ಐಫೋನ್ಗಳನ್ನು ಆ್ಯಪಲ್ ಕಂಪನಿ ಮಾತ್ರವಲ್ಲದೆ ಫಾಕ್ಸಾನ್ ಮತ್ತು ವಿಸ್ಟ್ರಾನ್ ಕಂಪನಿಗಳು ಸಹ ತಯಾರಿಸುತ್ತಿದೆ. ಇದೀಗ ಈ ಸಾಲಿಗೆ ಟಾಟಾ ಎಲೆಕ್ಟ್ರಾನಿಕ್ಸ್ ಕಂಪನಿ ಸಹ ಸೇರಿದೆ. ಇನ್ಮುಂದೆ ಟಾಟಾ ಕಂಪನಿ ಸಹ ಐಫೋನ್ಗಳನ್ನು ತಯಾರಿಸುತ್ತದೆ.
ಇದುವರೆಗೆ ಆ್ಯಪಲ್ ಕಂಪನಿಗೆ ಐಫೋನ್ ತಯಾರಿಸಿಕೊಡುತ್ತಿದ್ದ ವಿಸ್ಟ್ರಾನ್ ಇನ್ಮುಂದೆ ತನ್ನ ಕಾರ್ಯವನ್ನು ಭಾರತದಲ್ಲಿ ಸ್ಥಗಿತಗೊಳಿಸಲು ನಿರ್ಧರಿಸಿದೆ. ಆದ್ದರಿಂದ ಟಾಟಾ ಕಂಪೆನಿ ಈ ಕಂಪನಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿದೆ. ಇದೇ ಕಾರಣಕ್ಕೆ ಮುಂದಿನ ದಿನಗಳಲ್ಲಿ ಟಾಟಾ ಕಂಪನಿ ಐಫೋನ್ಗಳನ್ನು ತಯಾರಿಸಿಕೊಡಲಿದೆ