ಮುಲ್ಕಿ: ‘ಮೋಕೆದ ತುಳು ಅಪ್ಪೆ ಜೋಕುಲೆಗ್ ಸೊಲ್ಮೆಲು’ ಎಂದ ಮೋದಿ ಈ ಬಾರಿಯ ನಿರ್ಧಾರ, ಬಹುಮತದ ಬಿಜೆಪಿ ಸರ್ಕಾರ’ ಎಂದು ಮುಲ್ಕಿ ಬಿಜೆಪಿ ಸಮಾವೇಶವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಮಾಡಿದ್ದಾರೆ.ಮೂಡುಬಿದಿರೆ ಕ್ಷೇತ್ರದ ಮುಲ್ಕಿಯಲ್ಲಿ ನಡೆಯುತ್ತಿರುವ ಬಿಜೆಪಿ ಪಕ್ಷದ ಚುನಾವಣಾ ಪ್ರಚಾರ ಸಭೆಯಲ್ಲಿ ಪ್ರಧಾನಿ ಮೋದಿ ಗಮನಸೆಳೆದಿದ್ದಾರೆ.
ಈ ವೇಳೆ ಮುಲ್ಕಿ ವೆಂಕಟರಮಣ ಸ್ವಾಮಿಗೆ ನನ್ನ ನಮಸ್ಕಾರಗಳು. ದೇಶದ ಜನರೇ ನಮ್ಮ ರಿಮೋಟ್ ಕಂಟ್ರೋಲ್. ಕರ್ನಾಟಕವನ್ನು ದೇಶದಲ್ಲೇ ನಂ.1 ಮಾಡುವುದು ಬಿಜೆಪಿಯ ಸಂಕಲ್ಪ. ನಮ್ಮ ನಾಯಕರು ನಿವೃತ್ತಿ ಹೊಂದುತ್ತಿದ್ದು, ಈ ಬಾರಿ ನಮಗೆ ಅವಕಾಶ ಕೊಡಿ ಎಂದು ಕಾಂಗ್ರೆಸ್ ಮತಯಾಚನೆ ಮಾಡುತ್ತಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ನಾನು ನೋಡುತ್ತಿದ್ದೇನೆ, ಸಣ್ಣ ಮಕ್ಕಳೂ ಬಿಜೆಪಿ ಬೆಂಬಲಿಸುತ್ತಿದ್ದಾರೆ ಎಂದಿದ್ದಾರೆ. ಕರ್ನಾಟಕವನ್ನು ಮೂಲಸೌಕರ್ಯ, ತಯಾರಿಕೆ, ಕೃಷಿ ಕ್ಷೇತ್ರದಲ್ಲಿ ನಂಬರ್ ವನ್ ಮಾಡಬೇಕು ಎಂದರೆ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದರು.
ಸಾಮಾನ್ಯವಾಗಿ ಕರ್ನಾಟಕದಲ್ಲಿ ಬಂದಾಗ ಕನ್ನಡದಲ್ಲಿ ಭಾಷಣ ಪ್ರಾರಂಭಿಸುವ ಮೋದಿ ಅವರು ಇಂದು ತುಳು ಭಾಷೆಯಲ್ಲಿ ಮಾತು ಪ್ರಾರಂಭಿಸಿ ಗಮನಸೆಳೆದಿದ್ದಾರೆ.
“ಪರಶುರಾಮ ಕ್ಷೇತ್ರದ ಎನ್ನ ಮೋಕೆದ ತುಳು ಅಪ್ಪೆ ಜೋಕುಲೆಗ್ ಸೊಲ್ಮೆಲು” ಭಾಷಣ ಆರಂಭಿಸಿದ ಪ್ರಧಾನಿ ಮೋದಿ, ಭಜರಂಗಬಲಿಗೆ ಜೈ ಎನ್ನುವ ಮೂಲಕ ಕಾಂಗ್ರೆಸ್ ಗೆ ಟಾಂಗ್ ನೀಡಿದರು. ಜೊತೆಯಲ್ಲಿ ಕಳೆದ ಬಾರಿ ಶಿವಗಿರಿಯ ಭೇಟಿ ವೇಳೆ ನಾರಯಣಗುರುವಿನ ಅಶೀರ್ವಾದ ದೊಡ್ಡ ಅವಕಾಶ ಸಿಕ್ಕಿದೆ” ಎನ್ನುವ ಮೂಲಕ ಬಿಲ್ಲವ ಸಮುದಾಯ ಮನಗೆಲ್ಲುವ ಯತ್ನಿಸಿಸಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕರ್ನಾಟಕ ಸರ್ವನಾಶವಾಗಲಿದೆ ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ.ದೆಹಲಿ ‘ಕೈ’ ನಾಯಕರು ರಾಜ್ಯವನ್ನು ಎಟಿಎಂ ಮಾಡಿಕೊಳ್ಳಲಿದ್ದು, ಈಗಾಗಲೇ 85% ಸರ್ಕಾರ ನಡೆಸಿದ್ದಾರೆ. ಕಾಂಗ್ರೆಸ್ ವಿಕಾಸದ ವಿರುದ್ಧವಿದ್ದು, ಶಾಂತಿಗೆ ಭಂಗವಾಗಲಿದೆ. ತುಷ್ಟೀಕರಣ ಬಯಸಿ, ಭಯೋತ್ಪಾದಕರಿಗೆ ಬೆಂಬಲ ನೀಡುತ್ತಿದೆ. ಭಾರತೀಯ ಸೇನೆಯನ್ನು ನೋಡಿದರೆ ನಮ್ಮೆಲ್ಲರಿಗೂ ಗೌರವ, ಗರ್ವ ಎನಿಸುತ್ತದೆ. ಆದರೆ ಕೈ ನಾಯಕರಿಗೆ ಅಳು ಬರುತ್ತದೆ ಎಂದು ಲೇವಡಿ ಮಾಡಿದ್ದಾರೆ.
ಸ್ವಾತಂತ್ರ್ಯ ಬಂದು ಹಲವು ವರ್ಷಗಳು ಕಳೆದರೂ ಮೀನುಗಾರರ ಸಮುದಾಯಕ್ಕೆ ಕಾಂಗ್ರೆಸ್ ಯಾವುದೇ ಸಚಿವಾಲಯ ನಿರ್ಮಿಸಲಿಲ್ಲ. ಮೀನುಗಾರರಿಗೆ ಕಾಂಗ್ರೆಸ್ ದ್ರೋಹ ಬಗೆದಿದೆ. ದೆಹಲಿಯಲ್ಲಿನ ಸರ್ಕಾರಕ್ಕೆ ಮತ್ಸ್ಯೋದ್ಯಮ ಅಸ್ತಿತ್ವದಲ್ಲಿದೆ ಎಂದೇ ತಿಳಿದಿರಲಿಲ್ಲ. ಆದರೆ ಮೀನುಗಾರರ ಸಮುದಾಯಕ್ಕಾಗಿ ನಮ್ಮ ಸರ್ಕಾರವೂ ಮೀನುಗಾರರ ಕಲ್ಯಾಣಕ್ಕಾಗಿಯೇ ಪ್ರತ್ಯೇಕವಾದ ಸಚಿವಾಲಯ ನಿರ್ಮಿಸಿದೆವು. ರಾಜ್ಯದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಮತ್ತು ಸಿಎಂ ಬೊಮ್ಮಾಯಿ ಸರ್ಕಾರವೂ ಮತ್ಸ್ಯ ಸಿರಿ ಯೋಜನೆ ಆರಂಭಿಸಿದೆ ಎಂದು ಹೇಳಿದ್ದಾರೆ.
ವಿಶ್ವದೆಲ್ಲೆಡೆ ಹಿಂದೂಸ್ತಾನದ ಪರವಾಗಿ ಜೈಕಾರ ಹಾಕಲಾಗುತ್ತಿದೆ. ಇದಕ್ಕೆ ಕಾರಣ ನಿಮ್ಮ ಮತ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. ಕರ್ನಾಟಕ ಸ್ಟಾರ್ಟ್ ಅಪ್ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿದ್ದು, ಇದರಲ್ಲಿ ಸಾಮಾನ್ಯ ಕುಟುಂಬದ ಯುವಜನರೂ ಸಾಧನೆ ಮಾಡುತ್ತಿದ್ದಾರೆ. ನಾವು ಅಧಿಕಾರಕ್ಕೆ ಬಂದ ಬಳಿಕ ಹೆಚ್ಎಎಲ್ ಭಾರೀ ವಹಿವಾಟು ನಡೆಸಿದ್ದು, ಲಾಭದಾಯಕವಾಗಿದೆ. ದೆಹಲಿ & ಕರ್ನಾಟಕದಲ್ಲಿ ಸ್ಥಿರ ಸರ್ಕಾರ ಇರಬೇಕಿದ್ದು, ಬಿಜೆಪಿಗೆ ಮತ ಹಾಕಿ ಎಂದು ಮನವಿ ಮಾಡಿದ್ದಾರೆ.