ಕಾರ್ಕಳ : ಕಾರ್ಕಳದಲ್ಲಿ ಮೇ 1ರಂದು ಕಾರ್ಮಿಕ ದಿನಾಚರಣೆಯು ಸಿ ಐ ಟಿ ಯು ಸಂಘಟನೆಯ ನೇತೃತ್ವದಲ್ಲಿ ನಡೆಯಿತು. ಸಿ ಐ ಟಿ ಯು ರಾಜ್ಯ ಉಪಾಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ ಭಾಗವಹಿಸಿದ್ದರು. ಲಮೀನ ಕಾರ್ಮಿಕ ಸಂಘದ ಅಧ್ಯಕ್ಷರಾದ ಶ್ರೀ ಮೋಹನ ಚಂದ್ರಶೆಟ್ಟಿ ಹಾಗೂ ಕಾರ್ಮಿಕರು, ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷರಾದ ಶೇಖರ್ ಕುಲಾಲ್ ಹಾಗೂ ಕಾರ್ಮಿಕರು, ಬೀಡಿ ಕಾರ್ಮಿಕರ ಸಂಘದ ಅಧ್ಯಕ್ಷರಾದ ಶ್ರೀಮತಿ ಸುನೀತಾ ಶೆಟ್ಟಿ ಹಾಗೂ ಕಾರ್ಮಿಕರು, ಬಿಸಿಯೂಟ ಕಾರ್ಮಿಕ ಸಂಘದ ಅಧ್ಯಕ್ಷರಾದ ಶ್ರೀಮತಿ ಜಯಶ್ರಿ ಭಾಗವಹಿಸಿದ್ದರು.
ಮೇ 1ರಂದು ವಿಶ್ವದಾದ್ಯಂತ ಕಾರ್ಮಿಕ ದಿನವನ್ನು ಆಚರಿಸಲಾಗುತ್ತದೆ ಈ ಮೇ ದಿನಕ್ಕೆ ಅಂತರಾಷ್ಟ್ರೀಯ ಮಹತ್ವವಿದೆ ಮೇ ದಿನವು ವಿಶ್ವದ ಎಲ್ಲ ಕಾರ್ಮಿಕ ವರ್ಗ ಎಂಟು ಗಂಟೆ ಕೆಲಸದ ಅವಧಿಗಾಗಿ ನಡೆದ ಹೋರಾಟ ಅದೊಂದು ಜಾಗತಿಕ ಚಳುವಳಿಯಾಗಿ ವಿಶ್ವ ಕಾರ್ಮಿಕರ ದಿನವಾಗಿ ಕ್ರಾಂತಿಕಾರಿ ಮೇ ದಿನದ ಹೋರಾಟಕ್ಕೆ ನಾಂದಿಯಾಯಿತು ಪ್ರತಿ ಮೇ ದಿನ ಕಾರ್ಮಿಕ ವರ್ಗದ ಬೇಡಿಕೆಗಳ ಹೋರಾಟದ ದಿನವಾಗಿದೆ.