ಉಡುಪಿ;- ಮಲ್ಪೆ ಮುಖ್ಯ ರಸ್ತೆಯ ಕಲ್ಮಾಡಿ ಬಳಿ ರಿಕ್ಷಾ ಚಾಲಕರೊಬ್ಬರು ತೀರ ಅಸ್ಪಸ್ಥಗೊಂಡು ಸೌಚಾದಿ ಮಾಡಿಕೊಂಡು ರಿಕ್ಷಾದಲ್ಲಿಯೇ ಕಳೆದ ರಾತ್ರಿಯಿಂದ ಮಲಗಿದ್ದು, ವಿಷಯ ತಿಳಿದ ವಿಶು ಶೆಟ್ಟಿ ಖಾಸಗಿ ಆಂಬುಲೆನ್ಸ್ ಮುಖಾಂತರ ರಕ್ಷಿಸಿ, ಜಿಲ್ಲಾಸ್ಪತ್ರೆಗೆ ದಾಖಲಿಸಿದ ಘಟನೆ ನಡೆದಿದೆ.
ರೋಗಿಯ ಹೆಸರು ಫಿಲಿಫ್ ಎಡ್ವರ್ಡ್ ಲೂವಿಸ್ (47 ವ) ನಿಟ್ಟೂರು ಎಂದು ತಿಳಿದು ಬಂದಿದೆ. ವ್ಯಕ್ತಿಯ ಪರಿಸ್ಥಿತಿ ಚಿಂತಾಜನಕವಿದ್ದು ತೀವ್ರ ಡಯಾಬಿಟಿಸ್ ಕಾಯಿಲೆ ಹೊಂದಿದ್ದಾರೆ. ದೇಹದ ಕೆಲವು ಕಡೆ ರಕ್ತಸಿಕ್ತ ಗಾಯಗಳಿವೆ ಸಂಬಂಧಿಕರು ಜಿಲ್ಲಾಸ್ಪತ್ರೆಗೆ ಸಂಪರ್ಕಿಸುವಂತೆ ವಿಶು ಶೆಟ್ಟಿಯವರು ವಿನಂತಿಸಿಕೊಂಡಿದ್ದಾರೆ.