ಬೇಸಿಗೆ ಕಾಲವನ್ನು ಯಾರೂ ಇಷ್ಟಪಡುವುದಿಲ್ಲ. ಯಾಕಂದ್ರೆ ಈ ಸಮಯದಲ್ಲಿ ದೈಹಿಕವಾಗಿ ಸಾಕಷ್ಟು ಅನಾರೊಗ್ಯ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ. ಸೂರ್ಯನ ಶಾಖ, ಬಿಸಿಗಾಳಿ, ಬೆವರಿಳಿಯುವ ಚರ್ಮ ಯಾರಿಗೆತಾನೇ ಇಷ್ಟ ಹೇಳಿ? ಹೆಚ್ಚಿನ ಜನರು ಈ ಅವಧಿಯಲ್ಲಿ ನೆರಳನ್ನು ಹುಡುಕುತ್ತಾ ಇದ್ದರೆ ಇನ್ನೂ ಕೆಲವರು ಸನ್ ಬಾತ್ ಎಂದು ಸಮುದ್ರದ ಕಿನಾರೆಯಲ್ಲಿ ಬಿಸಿಲಿಗೆ ಮೈಯೊಡ್ಡಿ ಮಲಗಿರುತ್ತಾರೆ.
ಚರ್ಮದ ಆರೈಕೆ ಈ ಅವಧಿಯಲ್ಲಿ ಬಹಳ ಅಗತ್ಯ. ಒಣ, ಸುಕ್ಕುಗಟ್ಟಿದ ಚರ್ಮ ಈ ಋತುವಿನ ಹೆಚ್ಚಿನವರ ಸಮಸ್ಯೆಯಾಗಿದೆ. ಹೆಚ್ಚಿನ ಬಿಸಿಲು, ತೇವಾಂಶ, ಮತ್ತು ವಾತಾವರಣದಲ್ಲಿರುವ ಮಾಲಿನ್ಯಕಾರಕಗಳು ಚರ್ಮವನ್ನು ಮಂದ, ಎಣ್ಣೆಯುಕ್ತವನ್ನಾಗಿಸುತ್ತದೆ
ಚರ್ಮದ ಆರೈಕೆಗೆ ಪ್ರತಿಯೊಬ್ಬರೂ ತಮ್ಮದೇ ಆದ ವಿಧಾನಗಳನ್ನು ಪಾಲಿಸುವುದು ಸುಳ್ಳಲ್ಲ. ಯಾರಲ್ಲೇ ಕೇಳಿದರೂ ಎಲ್ಲರೂ ತಾವೇ ಹುಡುಕಿಕೊಂಡಿರುವ ವಿಧಾನಗಳನ್ನು ಹೇಳಿಕೊಳ್ಳುತ್ತಾರೆ. ತ್ವಚೆಯ ಸಮಸ್ಯೆಗಳಿಗೆ ಮತ್ತು ಆರೈಕೆಗೆ ಆಯುರ್ವೇದ ಬಹಳ ಉತ್ತಮವಾದ ಮತ್ತು ಯಾವುದೇ ಅಡ್ಡಪರಿಣಾಮಗಳಿಲ್ಲದ ಪರಿಹಾರವಾಗಿದೆ. ಆಯುರ್ವೇದ ಪದ್ಧತಿಗಳು ಬಹಳ ಪ್ರಾಚೀನಕಾಲದ್ದಾಗಿದ್ದು ಇದು ದೇಹದಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಲು ಸಹಕಾರಿಯಾಗಿದೆ. ಆಯುರ್ವೇದ ಕೇವಲ ಒಂದು ಔಷಧೀಯ ಪದ್ದತಿಯಾಗಿರದೆ ಒಂದು ಜೀವನಕ್ರಮವಾಗಿದೆ. ಆಯುರ್ವೇದದಲ್ಲಿ ತಿಳಿಸಲಾಗುವ ಹಲವು ಗಿಡಮೂಲಿಕೆಗಳು ಮತ್ತು ಆಹಾರಕ್ರಮಗಳು ಚರ್ಮಕ್ಕೆ ನವ ಯೌವ್ವನ ಸಿಗುವಂತೆ ಮಾಡುತ್ತದೆ.
ಬೇಸಿಗೆಯ ಸುಡು ಬಿಸಿಲಿನಿಂದ ಮತ್ತು ಶಾಖದಿಂದ ಚರ್ಮವನ್ನು ಕಾಪಾಡುವ ಕೆಲವು ಆಯುರ್ವೇದದ ಗುಣಗಳಿರುವ ಆಹಾರ ಮತ್ತು ಗಿಡಮೂಲಿಕೆಗಳ ವಿವರ ಇಲ್ಲಿದೆ:
ಬೇವು: ಹಲವು ಆಯುರ್ವೇದೀಯ ಪ್ರಯೋಜನಗಳಿರುವ ಬೇವು ನಮ್ಮ ಚರ್ಮದ ಆರೈಕೆಗೂ ಬಹಳ ಸಹಕಾರಿ. ಬೇವಿನಲ್ಲಿರುವ ಬಾಕ್ಟೀರಿಯಾ ನಿವಾರಕ ಮತ್ತು ಆಂಟಿಫಂಗಲ್ ಗುಣಗಳಿಂದಾಗಿ ತ್ವಚೆಯ ನಿರ್ವಿಷೀಕರಣದಲ್ಲಿ (ಡಿಟೋಕ್ಸ್) ಬೇವು ಬಹಳ ಸಹಕಾರಿ. ಇದು ಚರ್ಮದಲ್ಲಿರುವ ಅನಾವಶ್ಯಕ ರಂಧ್ರಗಳನ್ನು ಮುಚ್ಚಲು, ಮೊಡವೆ ಒಡೆಯುವಿಕೆ ತಡೆಯಲು, ಸಹಾಯ ಮಾಡುತ್ತದೆ. ಬೇವನ್ನು ಅದರ ಎಣ್ಣೆಯ ರೂಪದಲ್ಲಿ ಅಥವಾ ಹುಡಿಯ ರೂಪದಲ್ಲಿ ಚರ್ಮದ ಆರೈಕೆಗೆ ಬಳಸಬಹುದಾಗಿದೆ.
ಅರಿಶಿನ: ಚರ್ಮದ ಮೇಲೆ ಗಾಯ ಆದಾಗ ಅರಿಶಿನ ಹಚ್ಚದೇ ಇರುವವರು ಬಹಳ ವಿರಳ. ಬರಿ ಗಾಯವಾದಾಗ ಮಾತ್ರವಲ್ಲ ತ್ವಚೆಯ ಒಟ್ಟಾರೆ ಆರೋಗ್ಯಕ್ಕೆ ಅರಿಶಿನ ಬಹಳ ಸಹಕಾರಿ. ಇದು ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ತ್ವಚೆಯ ಅಂಗಾಂಶಗಳನ್ನು ಅಭಿವೃದ್ಧಿ ಮಾಡುತ್ತದೆ. ಚರ್ಮದ ಆಕರ್ಷಕ ಬಣ್ಣಕ್ಕೂ ಅರಿಶಿನ ಸಹಕಾರಿ. ಅರಿಶಿನ ವನ್ನು ನಮ್ಮ ಆಹಾರದ ಜೊತೆ ಸೇವಿಸಬಹುದು ಅಥವಾ ಅರಿಶಿನದ ಪೇಸ್ಟ್ ಮಾಡಿಯೂ ತ್ವಚೆಯ ಮೇಲೆ ಹಚ್ಚಿ ಇದರ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ನೆಲ್ಲಿಕಾಯಿ (ಆಮ್ಲಾ): ನೆಲ್ಲಿಕಾಯಿ ವಿಟಮಿನ್ ಸಿ ಯುಕ್ತ ಕಾಯಿಯಾಗಿದೆ. ಇದು ಚರ್ಮದ ಡಿಟೋಕ್ಸ್ ಗೆ (ನಿರ್ವಿಶೀಕರಣ) ಬಹಳ ಸಹಕಾರಿ. ಕಾಲಜನ್ ಉತ್ಪಾದನೆಯಲ್ಲು ಹೆಚ್ಚಿಸಲು ಕೂಡ ಇದು ಉಪಯುಕ್ತ. ಇದು ತ್ವಚೆಯ ಹೊಳಪನ್ನು ನೀಡುವ ಜೊತೆಗೆ ಚರ್ಮವನ್ನು ಆಕರ್ಷಕವನ್ನಾಗಿಸುತ್ತದೆ. ನೆಲ್ಲಿಕಾಯಿಯನ್ನು ಹಾಗೆಯೇ ತಿನ್ನಬಹುದು ಅಥವಾ ಆಮ್ಲಾ ಜ್ಯೂಸ್ ಮತ್ತು ಹುಡಿಯ ರೂಪದಲ್ಲಿ ಸೇವಿಸಬಹುದು ಅಥವಾ ಇನ್ನೂ ಹೆಚ್ಚಿನ ಪ್ರಯೋಜನ ಪಡೆಯಲು ಇದರ ಎಣ್ಣೆಯನ್ನು ದೇಹಕ್ಕೆ ಲೇಪಿಸಬಹುದು. ಕೊತ್ತಂಬರಿ: ಕೊತ್ತಂಬರಿ ನಾವು ಆಹಾರದ ಜೊತೆಗೆ ಸಾಮಾನ್ಯವಾಗಿ ಸೇವಿಸುವ ವಸ್ತುವಾಗಿದೆ.ಇದು ಚರ್ಮದಿಂದ ವಿಷಯುಕ್ತ ವಿಷಯಗಳನ್ನು ಹೊರಹಾಕಲು ಬಹಳ ಸಹಕಾರಿ. ಆಹಾರಕ್ಕೆ ಹೇಗೆ ಕೊತ್ತಂಬರಿ ಸೊಪ್ಪು ಹಾಕುವುದರಿಂದ ಸುಂದರವಾಗಿ ಕಾಣುತ್ತದೆಯೋ ಅದೇ ರೀತಿ ಇದರ ಉತ್ಕರ್ಷಕ ನಿರೋಧಕ ಗುಣಗಳು ತ್ವಚೆಯನ್ನು ಸುಂದರವನ್ನಾಗಿದುತ್ತದೆ. ಆಹಾರದ ಅಲಂಕಾರದ ಹೊರತಾಗಿ ಇದನ್ನು ನೀರಲ್ಲಿ ನೆನೆಸಿಟ್ಟು ಕುಡಿಯುವ ಮೂಲಕವೂ ಇದರ ಪ್ರಯೋಜನಗಳನ್ನು ಪಡೆಯಬಹುದು.
ನೆಲ್ಲಿಕಾಯಿ (ಆಮ್ಲಾ): ನೆಲ್ಲಿಕಾಯಿ ವಿಟಮಿನ್ ಸಿ ಯುಕ್ತ ಕಾಯಿಯಾಗಿದೆ. ಇದು ಚರ್ಮದ ಡಿಟೋಕ್ಸ್ ಗೆ (ನಿರ್ವಿಶೀಕರಣ) ಬಹಳ ಸಹಕಾರಿ. ಕಾಲಜನ್ ಉತ್ಪಾದನೆಯಲ್ಲು ಹೆಚ್ಚಿಸಲು ಕೂಡ ಇದು ಉಪಯುಕ್ತ. ಇದು ತ್ವಚೆಯ ಹೊಳಪನ್ನು ನೀಡುವ ಜೊತೆಗೆ ಚರ್ಮವನ್ನು ಆಕರ್ಷಕವನ್ನಾಗಿಸುತ್ತದೆ. ನೆಲ್ಲಿಕಾಯಿಯನ್ನು ಹಾಗೆಯೇ ತಿನ್ನಬಹುದು ಅಥವಾ ಆಮ್ಲಾ ಜ್ಯೂಸ್ ಮತ್ತು ಹುಡಿಯ ರೂಪದಲ್ಲಿ ಸೇವಿಸಬಹುದು ಅಥವಾ ಇನ್ನೂ ಹೆಚ್ಚಿನ ಪ್ರಯೋಜನ ಪಡೆಯಲು ಇದರ ಎಣ್ಣೆಯನ್ನು ದೇಹಕ್ಕೆ ಲೇಪಿಸಬಹುದು. ಕೊತ್ತಂಬರಿ: ಕೊತ್ತಂಬರಿ ನಾವು ಆಹಾರದ ಜೊತೆಗೆ ಸಾಮಾನ್ಯವಾಗಿ ಸೇವಿಸುವ ವಸ್ತುವಾಗಿದೆ.ಇದು ಚರ್ಮದಿಂದ ವಿಷಯುಕ್ತ ವಿಷಯಗಳನ್ನು ಹೊರಹಾಕಲು ಬಹಳ ಸಹಕಾರಿ. ಆಹಾರಕ್ಕೆ ಹೇಗೆ ಕೊತ್ತಂಬರಿ ಸೊಪ್ಪು ಹಾಕುವುದರಿಂದ ಸುಂದರವಾಗಿ ಕಾಣುತ್ತದೆಯೋ ಅದೇ ರೀತಿ ಇದರ ಉತ್ಕರ್ಷಕ ನಿರೋಧಕ ಗುಣಗಳು ತ್ವಚೆಯನ್ನು ಸುಂದರವನ್ನಾಗಿದುತ್ತದೆ. ಆಹಾರದ ಅಲಂಕಾರದ ಹೊರತಾಗಿ ಇದನ್ನು ನೀರಲ್ಲಿ ನೆನೆಸಿಟ್ಟು ಕುಡಿಯುವ ಮೂಲಕವೂ ಇದರ ಪ್ರಯೋಜನಗಳನ್ನು ಪಡೆಯಬಹುದು.
ತ್ರಿಫಲ: ಮೂರು ಆಯುರ್ವೇದ ಗಿಡಮೂಲಿಕೆಗಳ ಮಿಶ್ರಣದಿಂದ ಸಿಗುವ ಆರೋಗ್ಯಕರ ವಸ್ತುವೇ ತ್ರಿಫಲ. ಅಮಲಕಿ, ಬಿಭಿಟಕಿ ಮತ್ತು ಹರಿತಕಿ ಗಿಡಮೂಲಿಕೆಗಳು ಸೇರಿ ತ್ರಿಫಲ ಎನ್ನಿಸಿಕೊಳ್ಳುತ್ತವೆ. ಇದು ಜೀರ್ಣ ವ್ಯವಸ್ಥೆಯನ್ನು ಉತ್ತಮಗೊಳಿಸಿ ಅದರ ಮೂಲಕ ನಮ್ಮ ತ್ವಚೆಯ ಆರೋಗ್ಯವನ್ನು ಕಾಪಾಡುತ್ತದೆ. ತ್ರಿಫಲ ಕ್ಯಾಪ್ಸುಲ್ ಗಳು ಎಲ್ಲಾ ಆಯುರ್ವೇದ ಔಷಧಾಲಯಗಳಲ್ಲಿ ಸಿಗುವ ಸಾಮಾನ್ಯವಾದ ಔಷಧಿಯಾಗಿದ್ದು ಇದನ್ನು ನಿಯಮಿತವಾಗಿ ಸೇವಿಸುವ ಮೂಲಕ ಚರ್ಮದ ಆರೋಗ್ಯವನ್ನು ಕಾಪಾಡಬಹುದಾಗಿದೆ. ಎಳೆನೀರು (ತೆಂಗಿನ ನೀರು): ಬಾಯಾರಿಕೆ ನಿವಾರಣೆಗೆ, ದೇಹದಲ್ಲಿ ಉಷ್ಣವಾದಾಗ ನಾವು ಕುಡಿಯುವ ಎಳೆನೀರಿನಲ್ಲೂ ಚರ್ಮದ ಕಾಂತಿ ಹೆಚ್ಚಿಸುವ ಗುಣಗಳಿವೆ ಎಂದು ನಿಮಗೆ ತಿಳಿದಿತ್ತೇ ? ತೆಂಗಿನ ನೀರು ಎಲೆಕ್ಟ್ರೋಲೈಟ್ ನ ನೈಸರ್ಗಿಕ ಮೂಲವಾಗಿದೆ. ಇದು ದೇಹವನ್ನು ಹೈಡ್ರೇಟ್ ಮಾಡಲು ಮತ್ತು ದೇಹದಿಂದ ವಿಷಯುಕ್ತ ಅಂಶಗಳನ್ನು ಹೊರಹಾಕಲು ಸಹಾಯಕ. ಇದು ಖನಿಜಗಳಿಂದಲೂ ಸಮೃದ್ಧವಾಗಿದೆ. ಇದು ತ್ವಚೆಯ ಬಣ್ಣವನ್ನು ಆಕರ್ಷಕವಾಗಿಡಲು ಸಹಾಯಕ.
ಎಳೆನೀರು (ತೆಂಗಿನ ನೀರು): ಬಾಯಾರಿಕೆ ನಿವಾರಣೆಗೆ, ದೇಹದಲ್ಲಿ ಉಷ್ಣವಾದಾಗ ನಾವು ಕುಡಿಯುವ ಎಳೆನೀರಿನಲ್ಲೂ ಚರ್ಮದ ಕಾಂತಿ ಹೆಚ್ಚಿಸುವ ಗುಣಗಳಿವೆ ಎಂದು ನಿಮಗೆ ತಿಳಿದಿತ್ತೇ ? ತೆಂಗಿನ ನೀರು ಎಲೆಕ್ಟ್ರೋಲೈಟ್ ನ ನೈಸರ್ಗಿಕ ಮೂಲವಾಗಿದೆ. ಇದು ದೇಹವನ್ನು ಹೈಡ್ರೇಟ್ ಮಾಡಲು ಮತ್ತು ದೇಹದಿಂದ ವಿಷಯುಕ್ತ ಅಂಶಗಳನ್ನು ಹೊರಹಾಕಲು ಸಹಾಯಕ. ಇದು ಖನಿಜಗಳಿಂದಲೂ ಸಮೃದ್ಧವಾಗಿದೆ. ಇದು ತ್ವಚೆಯ ಬಣ್ಣವನ್ನು ಆಕರ್ಷಕವಾಗಿಡಲು ಸಹಾಯಕ.
ಆಲೊವೆರಾ: ಆಲೊವೆರಾ ಎಂದಾಗ ಎಲ್ಲರಿಗೂ ನೆನೆಪಾಗುವುದು ಅದರ ತಂಪಾಗಿಸುವ ಮತ್ತು ಚರ್ಮದ ಮೇಲೆ ಹಿತವಾಗಿಸುವ ಅದರ ಗುಣಗಳು. ಇದು ಸೂರ್ಯನ ಬಿಸಿಲಿನಿಂದ ಚರ್ಮದಲ್ಲಿ ಆಗುವ ಬದಲಾವಣೆಗಳನ್ನು ಸರಿ ಮಾಡಲು ಬಹಳ ಉಪಯುಕ್ತ. ಆಲೊವೆರಾ ಜೆಲ್ ಅಥವಾ ಕ್ರೀಮ್ ಅನ್ನು ನಿಯಮಿತವಾಗಿ ಹಚ್ಚುವ ಮೂಲಕ ತ್ವಚೆಯ ಕಾಂತಿಯನ್ನು ಕಾಯ್ದುಕೊಳ್ಳಬಹುದು. ಇವಿಷ್ಟೇ ಅಲ್ಲದೇ ಶ್ರೀಗಂಧ, ಮಂಜಿಷ್ಟ, ತುಪ್ಪ ದಂತಹ ಹಲವು ಆಯುರ್ವೇದೀಯ ಗುಣಗಳಿರುವ ವಸ್ತುಗಳನ್ನು ನಾವು ಬೇಸಿಗೆಯಲ್ಲಿ ತ್ವಚೆಯ ಆರೋಗ್ಯಕ್ಕೆ ಬಳಸಬಹುದಾಗಿದೆ.