ಉಡುಪಿ : ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿ ಗುಣಮುಖರಾದ ಲಕ್ಷ್ಮೀ ಶೆಡ್ತಿ ಯವರಿಗೆ ಸಂಬಂಧಿಕರು ಯಾರೂ ಪತ್ತೆಯಾಗದ ಕಾರಣ ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿಗಳು ಜಿಲ್ಲಾ ನಾಗರಿಕ ಸಮಿತಿಯ ಅಧ್ಯಕ್ಷರಾದ ನಿತ್ಯಾನಂದ ಒಳಕಾಡು ಇವರಿಗೆ ತಿಳಿಸಿರುತ್ತಾರೆ. ನಂತರ ಜಿಲ್ಲಾ ನಾಗರಿಕ ಸಮಿತಿಯ ಅಧ್ಯಕ್ಷರಾದ ನಿತ್ಯಾನಂದ ಒಳಕಾಡು ಹಾಗೂ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಯೋಜನಾ ಸಂಯೋಜಕರಾದ ಅಶ್ವಿನಿ ಬೆಳ್ಮಾರ್ ಮತ್ತು ಆಪ್ತ ಸಮಾಲೋಚಕರಾದ ರೋಶನ್ ಅಮೀನ್ ರವರು ಜೊತೆಗೂಡಿ ವೃದ್ದೆಗೆ ಆಶ್ರಯ ಕಲ್ಪಿಸುವ ಸಲುವಾಗಿ ಹಿರಿಯ ನಾಗರಿಕರ ಕನಸಿನ ಮನೆ ಉದ್ಯಾವರ ಇಲ್ಲಿಗೆ ದಾಖಲಿಸುತ್ತಾರೆ.ವೃದ್ಧರ ಸಂಬಂಧಿಕರಿದ್ದಲ್ಲಿ ದೂರವಾಣಿ ಸಂಖ್ಯೆ :0820-2526394 ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರವನ್ನು ಸಂಪರ್ಕಿಸಬಹುದು
.