ಬೆಳ್ತಂಗಡಿ: ನಗರ ಪಂಚಾಯತ್ ವ್ಯಾಪ್ತಿಯಲ್ಲಿ 11 ವಾರ್ಡ್ ಗಳಿಗೆ ನೀರು ಪೂರೈಸುತ್ತಿದ್ದ ಸೋಮಾವತಿ ನದಿ ನೀರಿಗೆ ದುಷ್ಕರ್ಮಿಗಳು ವಿಷ ಬೆರೆಸಿರುವ ಪರಿಣಾಮ ಸಾವಿರಾರು ಮೀನುಗಳ ಮಾರಣಹೋಮವಾಗಿವೆ.
ಸೋಮಾವತಿ ನದಿ ನಗರಕ್ಕೆ ಕುಡಿಯುವ ನೀರಿನ ಪ್ರಮುಖ ಆಶ್ರಯವಾಗಿದೆ. ನಗರಕ್ಕೆ ಪ್ರಸಕ್ತ ಪ್ರತಿ ದಿನ 10 ಲಕ್ಷ ಲೀಟರ್ ನೀರಿನ ಅವಶ್ಯಕತೆಯಿದ್ದು ಇದೇ ನೀರನ್ನು ಅವಲಂಬಿಸಲಾಗಿತ್ತು. ಆದರೆ ವಿಷ ಪ್ರಾಶನವಾಗಿರುವ ಪರಿಣಾಮ ನೀರು ಸರಬರಾಜನ್ನು ಸ್ಥಗಿತಗೊಳಿಸಲಾಗಿದೆ.
ಇಂದು ಮುಂಜಾನೆ ಈ ಘಟನೆ ನಡೆದಿದ್ದು, ನಗರಕ್ಕೆ ನೀರು ಸರಬರಾಜು ಮಾಡುತ್ತಿದ್ದ ನದಿಯಲ್ಲಿದ್ದ ಘಟಕಕ್ಕೆ ವಿಷ ಪ್ರಾಶಾನ ಮಾಡಿದ ಪರಿಣಾಮ ಸಾವಿರಾರು ಮೀನುಗಳ ಮಾರಣಹೋಮವಾಗಿದೆ ೨೦೨೦ರಲ್ಲೂ ಈ ರೀತಿಯ ಕೃತ್ಯ ಇದೇ ಸ್ಥಳದಲ್ಲಿ ನಡೆಸಲಾಗಿತ್ತು. ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು.