ಪರ್ಕಳ : ಏಪ್ರಿಲ್ 13:ರಾಷ್ಟ್ರೀಯ ಹೆದ್ದಾರಿ. ಈಶ್ವರ ನಗರದಲ್ಲಿ ಅರ್ಧದಲ್ಲಿ ಕಾಮಗಾರಿ ನಿಲ್ಲಿಸಿ. ದ ಪರಿಣಾಮ ಈಶ್ವರ ನಗರದಲ್ಲಿ ರುವ ನಗರ ಸಭೆಗೆ ಸೇರಿದ ಪಂಪ್ ಹೌಸಿನ ಬಳಿ ಮತ್ತೆ ಯಾತ್ರಿಕರ ಕಾರು ಅಪಘಾತಕ್ಕೀಡಾಗಿದೆ.
ಗುತ್ತಿಗೆದಾರರ ಅಸಹಾಯಕತೆ. ಮತ್ತು ಜನಪ್ರತಿನಿಧಿಗಳ ಕುಂಟು ನೆಪಗಳ ಕತೆಯನ್ನು ಹೇಳುತ್ತಾ. ಈ ರಾಷ್ಟ್ರೀಯ ಹೆದ್ದಾರಿ ಅರ್ಧದಲ್ಲಿ ನಿಂತಿದೆ. ಒಟ್ಟಿನಲ್ಲಿ ಈ ರಸ್ತೆಯಲ್ಲಿ ವಾಹನ ಚಲಾಯಿಸುವ ಪ್ರಯಾಣಿಕರು ತಮ್ಮ ಅಮೂಲ್ಯವಾದ ವಾಹನವನ್ನು ದಿಕ್ಕು ತಪ್ಪಿಸುವ ಮಾರ್ಗವಾಗಿ ಪರಿಣಮಿಸಿದೆ. ಎಂದು ಸಾರ್ವಜನಿಕರು ದೂರುತ್ತಿದ್ದಾರೆ
ಬೆಳಗಿನ ಜಾವ ತಮಿಳುನಾಡು ಮೂಲದ ಯಾತ್ರಿಕರು ಉಡುಪಿಯಿಂದ ಶೃಂಗೇರಿಗೆ ಹೊರಟಿದ್ದರು ಎಂದು ತಿಳಿದು ಬಂದಿದೆ. ವಾಹನದ ಏರ್ ಬ್ಯಾಗ್ ಕೂಡ ಓಪನ್ ಆಗಿದೆ. ಯಾತ್ರಿಕರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಶೀಘ್ರ ಕಾಮಗಾರಿ ಪ್ರಾರಂಭಿಸುತ್ತೇನೆ. ಹೇಳಿದ ಲೋಕಸಭಾ ಸದಸ್ಯರ ಮಾತು ಪರ್ಕಳದ ಭಾಗದ ಜನತೆಗೂ ಏಪ್ರಿಲ್ ಫೂಲ್ ಆಗಿದೆ. ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.