ಕಾರ್ಕಳ, 7 ಏಪ್ರಿಲ್ 2025: ಕಾರ್ಕಳದ ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆಯಲ್ಲಿ ಹೊಸ ವೈದ್ಯಕೀಯ ಸೇವೆಗಳನ್ನು ಆರಂಭಿಸಲಾಗಿದೆ. ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಎಂಡೋಕ್ರಿನೊಲೊಜಿ (ಅಂತಃಸ್ರಾವಶಾಸ್ತ್ರ) ತಜ್ಞರಾದ ಡಾ. ಅನುದೀಪ್ ಗದ್ದಂ ಮತ್ತು ಡಾ. ಅವಿವರ್ ಅವಸ್ಥಿ ಅವರು ಪ್ರತೀ ಬುಧವಾರ ಮದ್ಯಾಹ್ನದ ತನಕ ಸಮಾಲೋಚನೆಗೆ ಲಭ್ಯವಿದ್ದಾರೆ. ಮಧುಮೇಹ, ಥೈರಾಯ್ಡ್ ಅಸ್ವಸ್ಥತೆಗಳು ಮತ್ತು ಹಾರ್ಮೋನುಗಳ ಅಸಮತೋಲನದಂತಹ ಇತರ ಅಂತಃಸ್ರಾವಶಾಸ್ತ್ರದ ಸಮಸ್ಯೆಗಳನ್ನು ಎದುರಿಸುತ್ತಿರುವವರು ಈಗ ತಜ್ಞರ ಸಲಹೆ ಮತ್ತು ಆರೈಕೆ ಪಡೆಯಬಹುದು. ಇವರೊಂದಿಗೆ ಮೂತ್ರಶಾಸ್ತ್ರ ತಜ್ಞರಾದ ಡಾ. ಎಲ್.ಕೆ. ಗಣೇಶ್, ಮೂಳೆ ಮತ್ತು ಕೀಲು ತಜ್ಞರಾದ ಡಾ. ಅರವಿಂದ್ ಶಾನಭಾಗ್, ಮತ್ತು ಮನೋವೈದ್ಯಶಾಸ್ತ್ರ ತಜ್ಞರಾದ ಡಾ. ಗೌರವ್ ಕಿಣಿ ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಇದು ಸ್ಥಳೀಯ ಸಮುದಾಯಕ್ಕೆ ಉತ್ತಮ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಈ ಸೇವೆಯು ಕಾರ್ಕಳ ಮತ್ತು ಸುತ್ತಮುತ್ತಲಿನ ಪ್ರದೇಶಗಳ ರೋಗಿಗಳು ಸ್ಥಳೀಯವಾಗಿ ವಿಶೇಷ ವೈದ್ಯಕೀಯ ಆರೈಕೆಯನ್ನು ಸುಲಭವಾಗಿ ಪಡೆಯುವುದನ್ನು ಖಚಿತಪಡಿಸುತ್ತದೆ.
ಈ ಪ್ರತಿಷ್ಠಿತ ತಜ್ಞರನ್ನು ನಮ್ಮ ತಂಡಕ್ಕೆ ಸ್ವಾಗತಿಸಲು ನಾವು ಸಂತೋಷಪಡುತಿದ್ದೇವೆ. ಅವರ ಪರಿಣತಿಯು ಕಾರ್ಕಳದ ಜನರಿಗೆ ಉತ್ತಮ ಗುಣಮಟ್ಟದ ವೈದ್ಯಕೀಯ ಸೇವೆಯನ್ನು ನೀಡಲು ಸಹಕಾರಿಯಾಗಿದೆ ಎಂದು ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ ಕೀರ್ತಿನಾಥ ಬಲ್ಲಾಳ ತಿಳಿಸಿದ್ದಾರೆ .
ತಜ್ನ್ಯ ವೈದ್ಯರ ಲಭ್ಯತೆಯ ದಿನಗಳು ಮತ್ತು ಸಮಯದ ಕುರಿತು ಮಾಹಿತಿ, ಪೂರ್ವ ನಿಗಧಿ (ಅಪಾಯಿಂಟ್ ಮೆಂಟ್) , ಹಾಗೂ ಹೆಚ್ಚಿನ ಮಾಹಿತಿಗಾಗಿ 9731601150/08258-230583 ಅನ್ನು ಸಂಪರ್ಕಿಸಬಹುದು.