ಅಯೋಧ್ಯೆ :ಏಪ್ರಿಲ್ 06: ಅಯೋಧ್ಯೆಯಲ್ಲಿ ರಾಮ ದೇವಾಲಯ ನಿರ್ಮಾಣದ ನಂತರ ಎರಡನೇ ಶ್ರೀ ರಾಮ ನವಮಿ ಆಚರಣೆಗಳು ಅದ್ಧೂರಿಯಾಗಿ ನಡೆಯುತ್ತಿವೆ. ಇಂದು ಮಧ್ಯಾಹ್ನ 12 ಗಂಟೆಗೆ ರಾಮನಿಗೆ ಅಭಿಷೇಕ ನಡೆದಿದೆ. ಈ ಸಂದರ್ಭದಲ್ಲಿ, ಸೂರ್ಯನ ಕಿರಣಗಳೊಂದಿಗೆ ತಿಲಕವನ್ನು ಹಚ್ಚಲಾಗಿದೆ.
ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಸೂರ್ಯನ ಕಿರಣಗಳು ರಾಮನ ಹಣೆಯ ಮೇಲೆ ನಾಲ್ಕು ನಿಮಿಷಗಳ ಕಾಲ ಹೊಳೆದಿದೆ.
ದೇವಾಲಯದ ಮೂರನೇ ಮಹಡಿಯಿಂದ ಗರ್ಭಗುಡಿಯಲ್ಲಿರುವ ಬಾಲ ರಾಮನ ಹಣೆಯ ಮೇಲೆ ಸೂರ್ಯನ ಕಿರಣಗಳು ಬೀಳುವಂತೆ ವ್ಯವಸ್ಥೆ ಮಾಡಲಾಗಿತ್ತು. ಸನಾತನ ಧರ್ಮದಲ್ಲಿ, ಸೂರ್ಯನನ್ನು ಶಕ್ತಿಯ ಮೂಲವೆಂದು ಪರಿಗಣಿಸಲಾಗಿದೆ. ಸೂರ್ಯನು ತನ್ನ ಕಿರಣಗಳಿಂದ ರಾಮನಿಗೆ ತಿಲಕವನ್ನು ಹಚ್ಚಿದಾಗ ಅವನೊಳಗಿನ ದೈವತ್ವ ಜಾಗೃತಗೊಳ್ಳುತ್ತದೆ ಎಂದು ನಂಬಲಾಗಿದೆ. ಈ ಅದ್ಭುತ ದೃಶ್ಯವನ್ನು ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯ ಭಕ್ತರು ಅಯೋಧ್ಯೆಗೆ ಆಗಮಿಸುತ್ತಿದ್ದಾರೆ.