ಉಡುಪಿ:ಏಪ್ರಿಲ್ 05: ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಯುವತಿಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ಟ್‌ನಲ್ಲಿ ದಾಖಲಾಗಿರುವ ಹೇಬಿಯಸ್ ಕಾರ್ಪಸ್ ಅರ್ಜಿ ಹಿನ್ನೆಲೆಯಲ್ಲಿ ಜೀನಾ ಮೆರಿಲ್ ಹಾಗೂ ಆಕೆಯ ಪ್ರಿಯಕರ ಅಕ್ರಮ್ ಶುಕ್ರವಾರ ಹೈಕೋರ್ಟ್ ಮುಂದೆ ಹಾಜರಾದರು.
ಮಾ. 20ರಂದು ಜೀನಾ ಮೆರಿಲ್ ಅವರ ಪೋಷಕರು, ಅಕ್ರಮ್ ಜೀನಾಳನ್ನು ಅಪಹರಿಸಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮಾ.28ರಂದು ಹೈಕೋರ್ಟ್‌ಗೆ ಹುಡುಗಿಯ ಪೋಷಕರು ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಅದರಂತೆ ಎ. 4ರಂದು ಹೈಕೋರ್ಟ್‌ನ ಮುಂದೆ ಹಾಜರಾಗುವಂತೆ ಸೂಚಿಸಿತ್ತು.
ಹೈಕೋರ್ಟ್‌ನ ವಿಚಾರಣೆಯಲ್ಲಿ ನಾಯಮೂರ್ತಿಗಳ ಮುಂದೆ ತನ್ನನ್ನು ಯಾರೂ ಕೂಡ ಅಪಹರಿಸಿಲ್ಲ. ನಾನು ಸ್ವ- ಇಚ್ಛೆಯಿಂದ ಅಕ್ರಮ್ ಜತೆ ತೆರಳಿರುವುದಾಗಿ ತಿಳಿಸಿದ್ದಾಳೆ. ತಾಯಿ ಜತೆ ತೆರಳಲು ಜೀನಾ ಮೆರಿಲ್ ಒಪ್ಪಿಲ್ಲ. ಮುಂದಿನ ವಿಚಾರಣೆಯನ್ನು ಎ. 22ಕ್ಕೆ ನಿಗದಿಪಡಿಸಲಾಗಿದೆ.