ಉಡುಪಿ : ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಎ.9 ರಂದು ಜನ ಸಂಪರ್ಕ ಸಭೆ..!!
ಉಡುಪಿ:ಏಪ್ರಿಲ್ 05:ಮೆಸ್ಕಾಂ ಉಡುಪಿ ಉಪವಿಭಾಗ ಕಛೇರಿಯಲ್ಲಿ ಎ.9 ರಂದು ಬೆಳಗ್ಗೆ 10:30ಕ್ಕೆ ಜನ ಸಂಪರ್ಕ ಸಭೆ ನಡೆಯಲಿದ್ದು, ಮೆಸ್ಕಾಂನ ಅಧಿಕಾರಿಗಳು ಇದರಲ್ಲಿ ಭಾಗವಹಿಸಲಿದ್ದಾರೆ.
ಈ ಸಭೆಯಲ್ಲಿ ಸಂಬಂಧಪಟ್ಟ ಪ್ರದೇಶದ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸಲಿರುವುದರಿಂದ ಗ್ರಾಹಕರು ಅವಕಾಶವನ್ನು ಸದುಪಯೋಗ ಪಡಿಸಿ ಕೊಳ್ಳುವಂತೆ ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0820-2521761ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.