ಕಾರ್ಕಳ: ಏಪ್ರಿಲ್ 01 :ಕಾರ್ಕಳದ ಬೋಳ ಅಂಬರಾಡಿ ಗ್ರಾಮದಲ್ಲಿ ಹಾಡಹಗಲೇ ಚಿರತೆ ಪ್ರತ್ಯಕ್ಷವಾಗಿದೆ.ಮಾರ್ಚ್ 31ರ ಸಂಜೆ 7.30ಗೆ ಅಂಬರಾಡಿ ಶಾಲಾ ಪರಿಸರದಲ್ಲಿ ಚಿರತೆ ರಸ್ತೆ ಬದಿಯಲ್ಲಿ ಕಾಣಿಸಿಕೊಂಡಿದೆ .
ಈಗಾಗಲೇ ಹಲವಾರು ದನಕರು ಹಾಗು ಸಾಕುಪ್ರಾಣಿಗಳ ಮೇಲೆ ಈ ಚಿರತೆ ದಾಳಿ ಮಾಡಿದೆ.ಗ್ರಾಮಸ್ಥರು ಹಾಡ ಹಗಲೇ ಹೆದರಿಕೆಯಿಂದ ಬದುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ .ಈ ವಲಯದಲ್ಲಿ ರಸ್ತೆಯ ಯಾವುದೇ ದಾರಿದೀಪಗಳ ಅಳವಡಿಕೆ ಆಗಿಲ್ಲ,ಸಂಬಂಧ ಪಟ್ಟ ಅಧಿಕಾರಿಗಳು ಈ ದಾರಿದೀಪದ ಬಗ್ಗೆ ಗಮನ ಹರಿಸುತ್ತಿಲ್ಲ ರಾತ್ರಿ ಹೊತ್ತು ರಸ್ತೆಯ ಮೇಲೆಯೇ ಈ ಚಿರತೆ ಅನೇಕ ಪ್ರಯಾಣಿಕರ ಮುಂದೆ ಪ್ರತ್ಯಕ್ಷಕೊಂಡಿದೆ,
ಈ ಬಗ್ಗೆ ಅರಣ್ಯಾಧಿಕಾರಿಗಳು ಹಾಗು ಸಂಬಂಧ ಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು,ಹಾಗು ಹೈನುಗಾರಿಯನ್ನು ನಂಬಿಕೊಂಡ ಈ ಭಾಗದ ಜನರನ್ನು ರಕ್ಷಿಸಬೇಕು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.