ಬೆಂಗಳೂರು: ಮಾರ್ಚ್ 28 : ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‌ಸಿ) ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ವಿದ್ಯುತ್ ದರವನ್ನು ಪ್ರತಿ ಯೂನಿಟ್‌ಗೆ 36 ಪೈಸೆ ಹೆಚ್ಚಳ ಮಾಡುವ ಆದೇಶವನ್ನು ಹೊರಡಿಸಿದೆ.
* ಇದುವರೆಗೆ ಗೃಹಬಳಕೆ ನಿಗದಿತ 120 ರೂ. ಇತ್ತು. ಇನ್ಮುಂದೆ 145 ರೂ.ಗೆ ಜಂಪ್ ಆಗಲಿದೆ. ಅಂದರೆ, 25 ರೂ. ಏರಿಕೆಯಾಗಿದೆ.
* ಬೃಹತ್ ಕೈಗಾರಿಕೆ ವಾಣಿಜ್ಯ ಉದ್ದೇಶದ ವಿದ್ಯುತ್ ಬಳಕೆಯ ಮೇಲಿದ್ದ ಡಿಮ್ಯಾಂಡ್ ಚಾರ್ಜ್ 340 ರೂ.ನಿಂದ 345 ರೂ.ಗೆ ಏರಿಕೆಯಾಗಿದೆ.
* ಎಲ್-ಟಿ- ಸಣ್ಣ ಕೈಗಾರಿಕೆಗೆ 140 ರೂ. ಇದ್ದಿದ್ದು -150 ರೂ.ಗೆ ಡಿಮ್ಯಾಂಡ್ ಚಾರ್ಜ್ ಏರಿಕೆಯಾಗಿದೆ.
36 ಪೈಸೆ ಪ್ರತಿ ಯೂನಿಟ್‌ಗೆ ಹೆಚ್ಚಳವಾದರೆ, ಸಾಮಾನ್ಯವಾಗಿ ಹೆಚ್ಚು ವಿದ್ಯುತ್ ಬಳಕೆ ಮಾಡುವ ಕುಟುಂಬಗಳಿಗೆ ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ.