ಕುಂದಾಪುರ: ಮಾರ್ಚ್ 27:ಕಳ್ಳನೋರ್ವ ಮನೆಯವರು ದೇವಸ್ಥಾನಕ್ಕೆ ತೆರಳಿದ್ದ ವೇಳೆ ಬಾಗಿಲು ಮುರಿದು ಒಳಪ್ರವೇಶಿಸಿ ವೃದ್ಧೆಯ ಚಿನ್ನಾಭರಣ ಕದ್ದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ.ಇದೀಗ ಆರೋಪಿಯನ್ನು ಬಂಧಿಸುವಲ್ಲಿ ಕೋಟ ಪೊಲೀಸರು ಯಶಶ್ವಿ ಯಾಗಿದ್ದಾರೆ
ಮಣೂರು ನಿವಾಸಿ ಪ್ರವೀಣ್ ಕುಮಾರ್ ಶೆಟ್ಟಿ (28) ಬಂಧಿತ ಆರೋಪಿ ಎಂದು ತಿಳಿದು ಬಂದಿದ್ದು ಆರೋಪಿಯಿಂದ 25 ಗ್ರಾಂ ತೂಕದ ಸುಮಾರು 2.5 ಲಕ್ಷ ಮೌಲ್ಯದ ಕಳ್ಳತನವಾಗಿದ್ದ ಚಿನ್ನದ ಸರವನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.
ಮಾ.20ರಂದು ಮನೆಯವರೆಲ್ಲ ಸ್ಥಳೀಯ ಕೊಟ್ಟೂರು ದೇಗುಲದ ಜಾತ್ರೆಗೆಂದು ತೆರಳಿದ್ದರು. ಈ ವೇಳೆ ಮನೆಯಲ್ಲಿ ರುದ್ರಮ್ಮ(92) ಒಬ್ಬರೇ ಮನೆಯಲ್ಲಿ ಇದ್ದರು. ದಿನನಿತ್ಯದಂತೆ ಅವರು ಮಲಗುವಾಗ ತಾನು ಧರಿಸಿದ್ದ ಚಿನ್ನದ ಸರವನ್ನು ಮಂಚದ ಮೇಲೆ ಕಳಚಿಟ್ಟಿದ್ದರು. ಜಾತ್ರೆಗೆ ತೆರಳಿದ್ದ ಅವರ ಅಳಿಯ ಶ್ರೀಧರ್ ಅವರು ದಿಢೀರನೇ ಮನೆಗೆ ಬಂದಿದ್ದು, ಈ ವೇಳೆ ಮನೆಯ ಬಾಗಿಲು ಒಡೆದಿರುವುದು ಕಂಡುಬಂದಿತ್ತು.
ಈ ಬಗ್ಗೆ ರುದ್ರಮ್ಮರನ್ನು ಶ್ರೀಧರ್ ಅವರು ವಿಚಾರಿಸಿದಾಗ “ಯಾರೋ ಹುಡುಗ ಬಂದಿದ್ದ. ನನಗೆ ದೃಷ್ಟಿ ದೋಷವಿರುವುದರಿಂದ ಯಾರೆಂದು ತಿಳಿಯಲಿಲ್ಲ. ನಾನು ನೀವೇ ಬಂದಿರಬಹುದು ಎಂದು ಜಾತ್ರೆ ಮುಗಿಯಿತಾ? ಹೇಗಾಯಿತು ಎಂದು ಆತನಲ್ಲಿ ಕೇಳಿದ್ದೆ. ಆತನೂ ಮನೆಯವರಂತೆಯೇ ಮಾತನಾಡಿದ್ದ” ಎಂದು ತಿಳಿಸಿದ್ದರು. ಆಗ ಅನುಮಾನಗೊಂಡ ಶ್ರೀಧರ್ ಅವರು ಪರಿಶೀಲಿಸಿದಾಗ ಮಾರು 2.5 ಲಕ್ಷ ಮೌಲ್ಯದ ಚಿನ್ನದ ಸರ ಕಳವಾಗಿರುವುದು ತಿಳಿದುಬಂದಿದೆ. ಈ ಬಗ್ಗೆ ಕೋಟ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಕುರಿತು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ ಕೆ. ನಿರ್ದೇಶನದಲ್ಲಿ, ಹೆಚ್ಚುವರಿ ಎಸ್ಪಿಗಳಾದ ಎಸ್.ಟಿ. ಸಿದ್ದಲಿಂಗಪ್ಪ, ಪರಮೇಶ್ವರ ಹೆಗಡೆ ಮತ್ತು ಉಡುಪಿ ಡಿವೈಎಸ್‌ಪಿ ಪ್ರಭು ಡಿ.ಟಿ, ಬ್ರಹ್ಮಾವರ ವೃತ್ತ ನಿರೀಕ್ಷಕ ದಿವಾಕರ ಪಿ.ಎಂ. ಮಾರ್ಗದರ್ಶನದಲ್ಲಿ ಕೋಟ ಪೊಲೀಸ್ ಠಾಣೆಯ ಕಾನೂನು & ಸುವ್ಯವಸ್ಥೆ ವಿಭಾಗದ ಪೊಲೀಸ್ ಉಪನಿರೀಕ್ಷಕ ರಾಘವೇಂದ್ರ ಸಿ. ತನಿಖಾ ಪಿಎಸ್‌ಐ ಸುಧಾಪ್ರಭು ಪ್ರಕರಣದವಖಚಿತ ಮಾಹಿತಿಯನ್ನು ಪಡೆದು ಚಿನ್ನ ಕಳ್ಳವು ಆರೋಪಿಯನ್ನು ತೆಕ್ಕಟ್ಟೆ ಬಳಿಯಲ್ಲಿ ಬಂಧಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಸಹಾಯಕ ಉಪನಿರೀಕ್ಷಕ ಜಯಪ್ರಕಾಶ್, ಹೆಡ್ ಕಾನ್ಸ್ ಟೇಬಲ್ ರೇವತಿ, ಕೃಷ್ಣ ಶೇರೆಗಾರ, ಶ್ರೀಧರ್, ಸಿಬ್ಬಂದಿಗಳಾದ ರಾಘವೇಂದ್ರ, ವಿಜಯೇಂದ್ರ ಭಾಗಿಯಾಗಿದ್ದರು.