ಕಾರ್ಕಳ: ಮಾರ್ಚ್ 27:ನಿನ್ನೆ ಸಂಜೆ ಸುಮಾರು 4:00 ಗಂಟೆಗೆ ಬೀಸಿದ ಗಾಳಿ ಹಾಗೂ ಮಳೆಗೆ ಕಾರ್ಕಳದ ಹಲವು ಕಡೆ ಮರಗಳು ಬಿದ್ದು ವಾಹನ ಸಂಚಾರಕ್ಕೆ ತಡೆ ಉಂಟಾಗಿದೆ. ಪೆರುವಾಜೆ ರಸ್ತೆಯ hp ಗ್ಯಾಸ್ ಬಳಿ ಮರ ಉರುಳಿ ಎರಡು ವಿದ್ಯುತ್ ಕಂಬಗಳಿಗೆ ಹಾನಿ ಉಂಟಾಗಿದೆ.
ಪೆರುವಾಜೆ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಬೃಹತ್ ಮರ ರಸ್ತೆಗುರುಳಿ ಒಂದೆರಡು ವಿದ್ಯುತ್ ಕಂಬಗಳು ಬಿದ್ದಿವೆ. ಕಾರ್ಕಳ ಪೇಟೆಯಲ್ಲಿ ವಿದ್ಯುತ್ ಸಂಪರ್ಕ ಸಂಪೂರ್ಣ ಸ್ಥಗಿತ ಗೊಂಡಿತ್ತು.
ಕೆಲವು ದಿನಗಳಿಂದ ಉರಿ ಬಿಸಿಲಿನ ತಾಪಕ್ಕೆ ಮಳೆರಾಯ ನ ಕೃಪೆಯಿಂದ ಸ್ವಲ್ಪ ಸಮಯ ಮುಕ್ತಿ ಸಿಕ್ಕಿದೆ.