ಕಾರ್ಕಳ: ಮಾರ್ಚ್ 23:ಕಥೊಲಿಕ್ ಸಭಾ ಕಾಕ೯ಳ ಘಟಕದ ಅಧ್ಯಕ್ಷೆ ಶ್ರೀಮತಿ ಜ್ಯೋತಿ ಒಲಿವಿಯಾ ಡಿ’ಮೆಲ್ಲೊ ಇವರ ಮುಂದಾಳತ್ವದಲ್ಲಿ ಕಾಕ೯ಳ ಪುರಸಭೆಗೆ ಹೊಸದಾಗಿ ಮೂಡುಬಿದಿರೆಯಿಂದ ವಗಾ೯ವಣೆಗೊಂಡ ಮುಖ್ಯಾಧಿಕಾರಿ
ಶ್ರೀಮತಿ ಲೀನಾ ಬ್ರಿಟ್ಟೊರವರನ್ನ 19.3.2025 ಬುಧವಾರ ಕಾಕ೯ಳ ಪುರಸಭಾ ಕಾಯಾ೯ಲಾಯದಲ್ಲಿ ಕಥೊಲಿಕ್ ಸಭಾದ ಪದಾಧಿಕಾರಿಗಳಾದ ಕಾಯ೯ದಶಿ೯ ಶ್ರೀಮತಿ ಎಲ್ಸಿ ಡಿ’ಸೋಜ, ಕೋಶಾಧಿಕಾರಿ ಶ್ರೀ ಸೊಲೊಮನ್ ಆಲ್ವಾರಿಸ್, ಪ್ರತಿನಿಧಿ ಶ್ರೀ ಹೆನ್ರಿ ಸಾಂತ್ ಮಯೋರ್, ನಿಕಟಪೂರ್ವ ಅಧ್ಯಕ್ಷೆ ಶ್ರೀಮತಿ ಒಲಿವಿಯಾ ಡಿ’ಮೆಲ್ಲೊ, ನಿಯೋಜಿತ ಅಧ್ಯಕ್ಷೆ ಜೆಸಿಂತಾ ಡಿ’ಸೋಜ, ಪಾಸ್ಕಲ್ ಮೋನಿಸ್ ಇವರೆಲ್ಲರ ಹಾಜಾರಾತಿಯಲ್ಲಿ ಹೂ ಗುಚ್ಚ ನೀಡಿ ಶುಭಕೋರಿದರು.