ಕಾರ್ಕಳ:ಮಾರ್ಚ್ 21 :, ಪುರಸಭೆ ವ್ಯಾಪ್ತಿಗೆ ನೀರನ್ನು ಪೂರೈಸುತ್ತಿರುವ ಮುಂಡ್ಲಿ ಆಣೆಕಟ್ಟಿನಲ್ಲಿ ನೀರಿನ ಮಟ್ಟಗಣನೀಯವಾಗಿ ಕುಸಿಯುತ್ತಿರುವ ಕಾರಣ ಕಾರ್ಕಳ ನಗರ ಪ್ರದೇಶಗಳಿಗೆ ನೀರನ್ನು ದಿನಕ್ಕೆ ಒಮ್ಮೆ ಪೂರೈಕೆ ಮಾಡಲಾಗುತ್ತಿದೆ
ಸಾರ್ವಜನಿಕರು ನೀರನ್ನು ತೋಟಗಳಿಗೆ ಹಾಗೂ ತಮ್ಮ ವಾಹನಗಳನ್ನು ತೊಳೆಯಲು ಬಳಸಬಾರದು ನೀರನ್ನು ಆದಷ್ಟು ಬಹಳ ಜಾಗೃತೆಯಿಂದ ಬಳಸಿ ಸಹಕರಿಸುವಂತೆ ಕಾರ್ಕಳ ಪುರಸಭೆಯ ಮುಖ್ಯ ಅಧಿಕಾರಿ ಲೀನಾ ಬ್ರಿಟ್ಟೋ ಮಾಧ್ಯಮದ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ