ಉಡುಪಿ: ಮಾರ್ಚ್ 20:ಮಲ್ಪೆ ಬಂದರು ಪ್ರದೇಶದಲ್ಲಿ ಮೀನು ಕಳವು ಮಾಡಿದ್ದ ಆರೋಪದ ಮೇಲೆ ದಲಿತ ಮಹಿಳೆಯನ್ನು ಮರಕ್ಕೆ ಕಟ್ಟಿ ಸಾರ್ವಜನಿಕವಾಗಿ ಹಲ್ಲೆ ಮಾಡಿರುವುದನ್ನು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ಉಡುಪಿ ಜಿಲ್ಲಾ ಸಮಿತಿ ಬಲವಾಗಿ ಖಂಡಿಸಿದೆ. ಹಲ್ಲೆ ಮಾಡಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಪಕ್ಷವು ಒತ್ತಾಯಿಸುತ್ತದೆ. ಆರೋಪಗಳೇನೆ ಇದ್ದರೂ ತಪ್ಪಿತಸ್ಥ ಮಹಿಳೆಯನ್ನು ಕಾನೂನು ಕ್ರಮಕ್ಕಾಗಿ ಪೊಲೀಸರಿಗೆ ಒಪ್ಪಿಸಬಹುದಿತ್ತು. ತಾವೇ ಕಾನೂನು ಕೈಗೆತ್ತಿಕೊಂಡು ಪೊಲೀಸರಂತೆ ಶಿಕ್ಷೆ ನೀಡುವುದು ನಿಲ್ಲಬೇಕಾಗಿದೆ.ಈ ಹಿಂದೆ ಜಿಲ್ಲೆಯಲ್ಲಿ ನಡೆದ ಹಾಜಬ್ಬ ಹಸನಬ್ಬ ಗೋಸಾಗಾಟ ಆರೋಪದಲ್ಲಿ ಸಾರ್ವಜನಿಕ ಥಳಿತ ಇದು ನೆನಪಿಸುವಂತಿದೆ
ಈ ರೀತಿಯ ಘಟನೆಗಳು ಮರುಕಳಿಸದಂತೆ ಜಿಲ್ಲಾಡಳಿತವು ಹಲ್ಲೆ ಮಾಡಿದವರ ಮೇಲೆ ಹಾಗು ಇದನ್ನು ಪ್ರೋತ್ಸಾಹಿಸಿದವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಸಿಪಿಐ(ಎಂ) ಪಕ್ಷ ಒತ್ತಾಯಿಸುತ್ತದೆ.
ಬಂದರು ಪ್ರದೇಶದಲ್ಲಿ ಇತರ ಜಿಲ್ಲೆಯಿಂದ ಬಂದು ಕೆಲಸ ಮಾಡುವ ಮಹಿಳೆಯರಿಗೆ ಸೂಕ್ತ ಭದ್ರತೆಯ ಭರವಸೆ ನೀಡಬೇಕಾಗಿ ಪಕ್ಷವು ವಿನಂತಿಸುತ್ತದೆ.
ಅಮಾನವೀಯ ಘಟನೆ ಜಿಲ್ಲೆಯಲ್ಲಿ ನಡೆದರೂ, ಶಾಸಕರು ಮತ್ತು ಸಂಸದರು ಯಾಕೆ ಮೌನವಾಗಿದ್ದಾರೆ ಎಂದು ಸಿಪಿಐ(ಎಂ) ಪ್ರಶ್ನಿಸುತ್ತದೆ ಎಂದು ಸುರೇಶ್ ಕಲ್ಲಾಗರ ಕಾರ್ಯದರ್ಶಿ ಸಿಪಿಐಎಂ ಉಡುಪಿ ಜಿಲ್ಲೆ ಪ್ರಕಟಣೆ ಯಲ್ಲಿ ತಿಳಿಸಿರುತ್ತಾರೆ