ಮಣಿಪಾಲ, ಮಾರ್ಚ್ 19, 2025: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE) ನ್ಯೂಜಿಲೆಂಡ್‌ನ ಪ್ರಮುಖ ವಿಶ್ವವಿದ್ಯಾನಿಲಯವಾದ ಆಕ್ಲೆಂಡ್ ವಿಶ್ವವಿದ್ಯಾನಿಲಯ ಶಿಕ್ಷಣ ಮತ್ತು ಸಂಶೋಧನೆಯಲ್ಲಿ ಸಹಯೋಗದ ಉಪಕ್ರಮಗಳನ್ನು ಉತ್ತೇಜಿಸಲು ತಿಳುವಳಿಕೆಯ ಒಪ್ಪಂದವೊಂದಕ್ಕೆ ಇಂದು ಸಹಿ ಹಾಕಿದೆ. ಈ ತಿಳುವಳಿಕೆಯ ಒಪ್ಪಂದವು ವಿದ್ಯಾರ್ಥಿ ಮತ್ತು ಅಧ್ಯಾಪಕರ ವಿನಿಮಯ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳಿಗೆ ಅವಕಾಶ ಒದಗಿಸಲಿದೆ.
ನ್ಯೂಜಿಲೆಂಡ್‌ನ ಪ್ರಧಾನಿ ಕ್ರಿಸ್ಟೋಫರ್ ಲುಕ್ಸನ್ ಅವರು ಭಾರತಕ್ಕೆ ಅಧಿಕೃತ ಭೇಟಿ ಸಂದರ್ಭದಲ್ಲಿ ಐಐಟಿ ದೆಹಲಿ, ಹೌಜ್ ಖಾಸ್, ನವದೆಹಲಿಯಲ್ಲಿ ನಡೆದ “ಹಂಚಿಕೊಂಡ ದೃಷ್ಟಿಗಳು ಮತ್ತು ಸಂಪರ್ಕಿತ ಭವಿಷ್ಯಗಳು” ಕಾರ್ಯಕ್ರಮದಲ್ಲಿ ಒಪ್ಪಂದ ಮಾಡಿಕೊಳ್ಳಲಾಯಿತು. ಮಾಹೆಯ ಉಪಕುಲಪತಿ ಲೆಫ್ಟಿನೆಂಟ್ ಜನರಲ್ ಡಾ.ಎಂ.ಡಿ.ವೆಂಕಟೇಶ್ ಅವರು ನ್ಯೂಜಿಲೆಂಡ್‌ನ ಪ್ರಧಾನ ಮಂತ್ರಿಯವರ ಸಮ್ಮುಖದಲ್ಲಿ ಆಕ್ಲೆಂಡ್ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊಫೆಸರ್ ಡಾನ್ ಫ್ರೆಶ್‌ವಾಟರ್ ಅವರೊಂದಿಗೆ ಒಪ್ಪಂದವನ್ನು ವಿನಿಮಯ ಮಾಡಿಕೊಂಡರು.
ಸಮಾರಂಭದಲ್ಲಿ ನ್ಯೂಜಿಲೆಂಡ್ ನ ಶಿಕ್ಷಣದ ಮುಖ್ಯ ಕಾರ್ಯನಿರ್ವಾಹಕರಾದ ಅಮಂಡಾ ಮಾಲು ಮತ್ತು ಐಐಟಿ ದೆಹಲಿಯ ನಿರ್ದೇಶಕ ಪ್ರೊ.ರಂಜನ್ ಬ್ಯಾನರ್ಜಿ ಸೇರಿದಂತೆ ಗಣ್ಯ ಅತಿಥಿಗಳು ಉಪಸ್ಥಿತರಿದ್ದರು. ಮಾಹೆ ಬೆಂಗಳೂರಿನ ಪ್ರೊ ವೈಸ್ ಚಾನ್ಸೆಲರ್ ಡಾ. ಮಧು ವೀರರಾಘವನ್, ಎಂಐಟಿ ಬೆಂಗಳೂರಿನ ನಿರ್ದೇಶಕ ಡಾ. ಐವನ್ ಜೋಸ್ ಮತ್ತು ಮಾಹೆ ಅಂತಾರಾಷ್ಟ್ರೀಯ ಸಹಯೋಗದ ನಿರ್ದೇಶಕ ಡಾ. ಅನುಪ್ ನಹಾ ಉಪಸ್ಥಿತರಿದ್ದರು. ಜಾಗತಿಕ ಶೈಕ್ಷಣಿಕ ಸಹಕಾರವನ್ನು ಹೆಚ್ಚಿಸುವಲ್ಲಿ ಈ ಸಹಭಾಗಿತ್ವದ ಪ್ರಾಮುಖ್ಯತೆಯನ್ನು ಒತ್ತಿಹೇಳಲು ಮತ್ತು ವಿದ್ಯಾರ್ಥಿಗಳಿಗೆ ಅವಕಾಶಗಳನ್ನು ಸೃಷ್ಟಿಸುವ ಗಮನಾರ್ಹ ಪಾಲುದಾರಿಕೆಗೆ ಅವರು ಸಾಕ್ಷಿಯಾಗಿದ್ದರು.
ಹೆಚ್ಚಿನ ಮಾಹಿತಿಗಾಗಿ www.manipal.edu ಗೆ ಭೇಟಿ ನೀಡಿ