ಕಾರ್ಕಳ:ಮಾರ್ಚ್ 19:ಶ್ರೀ ವಿಷ್ಣುಮೂರ್ತಿ ದೇವಸ್ಥಾನ ದ ವಾರ್ಷಿಕ ಜಾತ್ರಾ ಮಹೋತ್ಸವ ಹಾಗೂ ಶ್ರೀ ಮನ್ಮಹಾರ ರಥೋತ್ಸವ ಹಾಗೂ ಮಹಾ ಅನ್ನಸಂತರ್ಪಣೆ ದಿನಾಂಕ 14 ರಿಂದ ಮೊದಲ್ಗೊಂಡು 17 ರತನಕ ಶ್ರೀ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಪಾದಂಗಳವರ ಶುಭಾಶಿರ್ವಾದ ಮತ್ತು ಪುತ್ತೂರು ಶ್ರೀ ಶ್ರೀಶ ತಂತ್ರಿಗಳ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆಯಿತು.
ದಿನಾಂಕ 17 ರಂದು ಕವಾಟೋ ದ್ಗಾಟನೆ ಗಣಹೋಮ ತುಲಾಭಾರ ಸೇವೆ, ಬಲಿ ಮಹಾರಥೋತ್ಸವ ,ಪಲ್ಲಪೂಜೆ,ಪ್ರಸಾದ ವಿತರಣೆ, ಅನ್ನಸಂತರ್ಪಣೆ, ನಂತರ ಸಾಯಂಕಾಲ ಭಜನೆ, ಬಲಿ, ನರ್ತನ ಬಲಿ ಪಲ್ಲಕಿ ಉತ್ಸವ,ಕಟ್ಟೆಪೂಜೆ,ಓಕುಳಿ, ನಂತರ ಮುಂಡಿಲತಾಯಿ ದೈವದ ನೇಮೋತ್ಸವ ಅವಭೃತ ಸ್ನಾನ ದ್ವಜಾಅವರೋಹಣ ಇತ್ಯಾದಿ ,ಶ್ರೀ ವಿಷ್ಣುಮೂರ್ತಿ ದೇವರ ಸನ್ನಿಧಾನದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆಯಿತು.
ಪ್ರಧಾನ ಅರ್ಚಕರು ಎ.ಶ್ರೀನಿವಾಸ ಆಚಾರ್ಯ , ಅಧ್ಯಕ್ಷರು ಮನ್ಮಥ ಕುಮಾರ್ ಶೆಟ್ಟಿ ಬೆರಂದೊಟ್ಟು ಗುತ್ತು,ವ್ಯವಸ್ಥಾಪನಾ ಸಮಿತಿ,ಹಾಗೂ ಸಮಿತಿಯ ಸರ್ವ ಸದಸ್ಯರು ಅರ್ಚಕ ವೃಂದದವರು ,ಹಾಗೂ ಊರ ಪರವೂರ ಭಕ್ತಾದಿಗಳು ಸೇರಿದ್ದರು.